ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಠಾಣಾ ವ್ಯಾಪ್ತಿಯ ವಿವಿಧೆಡೆ‌ ಕೈಚಳಕ ತೋರಿದ ಕಳ್ಳರು - Karavali Times ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಠಾಣಾ ವ್ಯಾಪ್ತಿಯ ವಿವಿಧೆಡೆ‌ ಕೈಚಳಕ ತೋರಿದ ಕಳ್ಳರು - Karavali Times

728x90

19 March 2020

ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಠಾಣಾ ವ್ಯಾಪ್ತಿಯ ವಿವಿಧೆಡೆ‌ ಕೈಚಳಕ ತೋರಿದ ಕಳ್ಳರು




ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ನರಿಕೊಂಬು ಮತ್ತು ಶಂಭೂರು ಗ್ರಾಮದ ವಿವಿಧೆಡೆ ಕಳ್ಳರು ಬುಧವಾರ ಮಧ್ಯರಾತ್ರಿ ಹಾಗೂ ಗುರುವಾರ ಬೆಳಗ್ಗಿನ ಜಾವ ನಡುವೆ ಸರಣಿ ಕಳವಿಗೆ ವಿಫಲ ಯತ್ನ ನಡೆಸಿದ್ದಾರೆ.

ಬಂಟ್ವಾಳ  ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನರಿಕೊಂಬು ಗ್ರಾಮದ ದ ಕ ಜಿ ಪಂ ಹಿ ಪ್ರಾಥಮಿಕ ಶಾಲೆಯ ಮುಂಭಾಗದ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು ಕಚೇರಿಯಲ್ಲಿದ್ದ ಕಪಾಟಿನ ಬಾಗಿಲನ್ನು ಮುರಿದು ಅದರಲ್ಲಿದ್ದ ಪುಸ್ತಕವನ್ನೆಲ್ಲಾ ಕೊಠಡಿಯಲ್ಲಿ ಚೆಲ್ಲಾಪಿಲ್ಲಿ ಮಾಡಿ ನಗದು ಹಣಕ್ಕಾಗಿ ಶೋಧಿಸಿದ್ದಾರೆ. ಆದರೆ ಯಾವುದೇ ನಗದು ಪತ್ತೆಯಾಗದಿರುವುದರಿಂದ ಪುಸ್ತಕವನ್ನು ಹಾಗೆ ಬಿಟ್ಟು ಬರಿಗೈಯಲ್ಲಿ ತೆರಳಿದ್ದಾರೆ.

ಬಳಿಕ ಸಮೀಪದ ವಿವೇಕ ಜಾಗೃತ ಬಳಗದ ಕಚೇರಿಯ ಬಾಗಿಲು ಮುರಿದು ಒಳ ಪ್ರವೇಶಿಸಿದ ಕಳ್ಳರು ಅಲ್ಲಿದ್ದ ಕಾಣಿಕೆ ಡಬ್ಬಿಯನ್ನು ಹೊತ್ತೊಯ್ದಿದಿದ್ದಾರೆ. ಬಳಿಕ  ಶಂಭೂರು ದ ಕ ಜಿ ಪಂ ಹಿ ಪ್ರಾಥಮಿಕ ಶಾಲೆಯ ಬಾಗಿಲು ಮುರಿದು ಕಳವಿಗೆ ವಿಫಲ ಯತ್ನ ನಡೆಸಿದ್ದಾರೆ. ಅಲ್ಲದೆ  ಪಕ್ಕದ ಅಂಗನವಾಡಿ ಹಾಗೂ ಶ್ರೀರಾಮ ಭಜನಾ ಮಂದಿರದಲ್ಲು ಕಳ್ಳರು ಬಾಗಿಲು ಮುರಿದು ಕಳವಿಗೆ ವಿಫಲಯತ್ನ ನಡೆಸಿ ಬರಿಗೈಯಲ್ಲಿ ತೆರಳಿದ್ದಾರೆ.

ಘಟನಾ ಸ್ಥಳಕ್ಕೆ ಬಂಟ್ವಾಳ  ನಗರ ಹಾಗೂ ಗ್ರಾಮಾಂತರ ಠಾಣಾಧಿಕಾರಿಗಳಾದ  ಅವಿನಾಶ್ ಹಾಗೂ  ಪ್ರಸನ್ನ ಅವರು ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಎಲ್ಲಾ ಪ್ರಕರಣಗಳ ಬಗ್ಗೆ  ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಬಂಟ್ವಾಳ ಕ್ಷೇತ್ರ  ಶಿಕ್ಷಣಾಧಿಕಾರಿ ಜ್ಞಾನೇಶ್ ಅವರು ಕಳವಿಗೆ ವಿಫಲ ಯತ್ನ ನಡೆದ ಶಾಲೆ ಗಳಿಗೆ ಭೇಟಿ ನೀಡಿ  ಪರಿಶೀಲನೆ ನಡೆಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಠಾಣಾ ವ್ಯಾಪ್ತಿಯ ವಿವಿಧೆಡೆ‌ ಕೈಚಳಕ ತೋರಿದ ಕಳ್ಳರು Rating: 5 Reviewed By: karavali Times
Scroll to Top