ಬಂಟ್ವಾಳ (ಕರಾವಳಿ ಟೈಮ್ಸ್) : ಅಕ್ಕನ ಮನೆಯಲ್ಲಿ ಕೆಲಸಕ್ಕಿದ್ದ ಯುವತಿಯನ್ನು ತಮ್ಮನೇ ಬೆದರಿಕೆ ಒಡ್ಡಿ ಸರಣಿ ಅತ್ಯಾಚಾರಗೈದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಆರೋಪಿ ಬಿ ಮೂಡ ಗ್ರಾಮದ ತಲಪಾಡಿ ನಿವಾಸಿ ಹಮೀದ್ ಪರಾರಿಯಾಗಿದ್ದು ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿ ವಿವಾಹಿತ ಸಂತ್ರಸ್ಥ ಯುವತಿಯು ಕಳೆದ ಕೆಲವು ದಿನಗಳಿಂದ ಬಿ ಮೂಡ ಗ್ರಾಮದ ತಲಪಾಡಿ ಎಂಬಲ್ಲಿನ ನಿವಾಸಿ ರಝಯಾ ರವರ ಮನೆಕೆಲಸಕ್ಕೆ ಸೇರಿಕೊಂಡಿದ್ದಳು.
ಸದ್ರಿ ಮನೆಯ ಮನೆಯೊಡತಿಯ ಅಣ್ಣನಾದ ಪ್ರಕರಣದ ಆರೋಪಿ ಹಮೀದ್ ಅಕ್ಕನ ಮನೆಗೆ ಬಂದು ಹೋಗುತ್ತಿದ್ದವನು ಸಂತ್ರಸ್ಥ ಯುವತಿಯನ್ನು ಕೆಲವು ದಿನಗಳಿಂದ ಒಟ್ಟು 3 ಬಾರಿ ಅತ್ಯಾಚಾರವೆಸಗಿದ್ದು, ಸಂತ್ರಸ್ಥ ಯುವತಿ ಪ್ರತಿರೋಧ ತೋರಿದಾಗ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಘಟನೆಯಿಂದ ನೊಂದ ಯುವತಿಯು ಮಾ 14 ರಂದು ರಂದು ಸೋಪ್ ವಾಟರ್ ಕುಡಿದು ವಾಂತಿ ಮಾಡಿದ್ದು, ಮನೆಯವರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಬಂದಾಗ ವೈದ್ಯರು ಪರೀಕ್ಷಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ : 376(2)(F)(N), 506,504,323 ಯಂತೆ ಪ್ರಕರಣ ದಾಖಲಾಗಿದ್ದು, ಪ್ರಕರಣ ತನಿಖೆಯಲ್ಲಿರುತ್ತದೆ.
0 comments:
Post a Comment