ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಕೊರೊನಾ ವೈರಸ್ ಭೀತಿಯಲ್ಲಿ ಸರಕಾರ ನಿಯಮಾವಳಿ ಹಾಗೂ ಖಾಝಿಗಳ ಸೂಚನೆಯಂತೆ ಮುಸ್ಲಿಮರು ಶುಕ್ರವಾರದ ಸಾಮೂಹಿಕ ನಮಾಝನ್ನು ಹೃಸ್ವವಾಗಿ ನೆರವೇರಿಸಿಕೊಂಡರು.
ಶುಕ್ರವಾರ ಮಧ್ಯಾಹ್ನ ಅವಧಿಗೆ ಮುಂಚಿತವಾಗಿ ಜನ ಮಸೀದಿಯಲ್ಲಿ ಸೇರುವುದನ್ನು ನಿರ್ಭಂಧಿಸಲಾದ ಹಿನ್ನಲೆಯಲ್ಲಿ ಆಝಾನ್ ಬಳಿಕ ಜುಮಾ ಸಮಯದಲ್ಲೇ ಮಸೀದಿಗಳಿಗೆ ಆಗಮಿಸಿದ ಮುಸ್ಲಿಂ ಬಾಂಧವರು ಜುಮಾ ಖುತುಬಾ ಹಾಗೂ ನಮಾಝ್ ಆದ ತಕ್ಷಣ ಮಸೀದಿಯಿಂದ ತೆರಳಿದರು. ಮಸೀದಿ ದರ್ಮ ಗುರುಗಳ ಯಾವುದೇ ಉಪನ್ಯಾಸಕ್ಕೆ ಬ್ರೇಕ್ ಹಾಕಲಾಗಿತ್ತು. ಹಲವು ಮಸೀದಿಗಳಲ್ಲಿ ಖುತುಬಾ ಹಾಗೂ ನಮಾಝ್ ಸಮಯಗಳನ್ನೂ ಕೂಡಾ ಬದಲಾಯಿಸಲಾಗಿತ್ತು
0 comments:
Post a Comment