ಬಂಟ್ವಾಳ (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಬಂಟ್ವಾಳ ಡಿವಿಷನ್ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡಿನ ಜಿಲ್ಲಾ ಕಛೇರಿಯಲ್ಲಿ ಇತ್ತೀಚೆಗೆ ನಡೆಯಿತು. ಡಿವಿಷನ್ ಅಧ್ಯಕ್ಷ ಅಕ್ಬರ್ ಅಲಿ ಮದನಿ ಸಭಾಧ್ಯಕ್ಷತೆ ವಹಿಸಿದ್ದರು.
ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸೆರ್ಕಳ ಇಬ್ರಾಹಿಂ ಸಖಾಫಿ ಸಭೆಯನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ ವರದಿ ವಾಚಿಸಿ, ಕೋಶಾಧಿಕಾರಿ ಮುಹಮ್ಮದ್ ಅಲಿ ಮದನಿ ಲೆಕ್ಕಪತ್ರ ಮಂಡಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ ಪ್ರಸ್ತಾವನೆಗೈದರು. ಎಸ್ಸೆಸ್ಸೆಫ್ ಜಿಲ್ಲಾ ಪ್ರಮುಖ ನವಾಝ್ ಸಖಾಫಿ ತರಗತಿ ನಡೆಸಿದರು.
ಚುನಾವಣಾ ವೀಕ್ಷಕರಾಗಿ ದ.ಕ. ವೆಸ್ಟ್ ಝೋನ್ ಅಧ್ಯಕ್ಷ ಮುನೀರ್ ಸಖಾಫಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ನೂತನ ಅಧ್ಯಕ್ಷರಾಗಿ ಸಿದ್ದೀಕ್ ಸಅದಿ, ಪ್ರಧಾನ ಕಾರ್ಯದರ್ಶಿಯಾಗಿ ಹಾರಿಸ್ ಪೆರಿಯಪಾದೆ, ಕೋಶಾಧಿಕಾರಿಯಾಗಿ ಅಸ್ಲಂ ಸಂಪಿಲ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಹಾರಿಸ್ ಚಟ್ಟೆಕ್ಕಲ್, ಉಪಾಧ್ಯಕ್ಷರಾಗಿ ಮುಹಮ್ಮದ್ ಅಲಿ ಮದನಿ, ಹಂಝ ಮಂಚಿ, ಕಾರ್ಯದರ್ಶಿಯಾಗಿ ಮೌಸೂಫ್ ಅಬ್ದುಲ್ಲ ಅವರನ್ನು ಆರಿಸಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಕ್ಬರ್ ಅಲಿ ಮದನಿ, ಇಬ್ರಾಹಿಮ್ ಕರೀಂ ಕದ್ಕಾರ್, ಇಬ್ರಾಹಿಂ ಸುರಿಬೈಲು, ಇಬ್ರಾಹಿಂ ಪಿ.ಎಸ್, ನೌಫಲ್, ಝುಬೈರ್ ಸಂಪಿಲ, ಮನ್ಸೂರ್ ವಗ್ಗ, ಹನೀಫ್ ಪಲ್ಲಮಜಲು, ಸಂಶುದ್ದೀನ್ ಪಾದಿಲ, ಮಜೀದ್ ಕದ್ಕಾರ್ ಅವರನ್ನು ನೇಮಿಸಲಾಯಿತು.
ಡಿವಿಷನ್ ಉಸ್ತುವಾರಿ ಜುನೈದ್ ಸಖಾಫಿ ಬೆಳ್ಮ, ಝೋನ್ ನೇತಾರರಾದ ಆಬಿದ್ ನಈಮಿ, ಮನ್ಸೂರ್ ಬಜಾಲ್ ಉಪಸ್ಥಿತರಿದ್ದರು.
0 comments:
Post a Comment