ಬಂಟ್ವಾಳ (ಕರಾವಳಿ ಟೈಮ್ಸ್) : ಬಾರತ ಮಾತ್ರವಲ್ಲ ಜಗತ್ತೇ ಹಿಂದೆಂದೂ ಕಾಣದ, ಊಹಿಸಿರದ ರೀತಿಯಲ್ಲಿ ಸಂಕಟವನ್ನು ಎದುರಿಸುತ್ತಿದೆ. ಭಾರತದ 135 ಕೋಟಿ ನಾಗರಿಕರ ಪ್ರಾಣವೂ ಗೃಹಬಂಧನದಲ್ಲಿದೆ. ಇದು ತಮಾಷೆಯ ಸಂಗತಿಯಲ್ಲ. ಕೊರೋನಾ ಹಿಮ್ಮೆಟ್ಟಿಸಲು ಸರಕಾರದ ಆದೇಶ ಪಾಲಿಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ನನ್ನ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪ್ರತಿಯೊಬ್ಬ ನಾಗರಿಕನ ಅಗತ್ಯ ಅವಶ್ಯಕತೆಗಳನ್ನು ಪೂರೈಸಲು ತಾಲೂಕಾಡಳಿತ ವ್ಯವಸ್ಥೆ, ಆರಕ್ಷಕ ಅಧಿಕಾರಿಗಳು, ಸಿಬ್ಬಂದಿಗಳು ನನ್ನ ಕಛೇರಿಯನ್ನು ಕೇಂದ್ರೀಕರಿಸಿಕೊಂಡು ದಿನದ 24 ಗಂಟೆಯೂ ನಿಮ್ಮ ಸೇವೆಗೆ ನೆರವು ತಂಡ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ದೇಶದ ಪ್ರಧಾನ ಮಂತ್ರಿಗಳು ರಾಜ್ಯದ ಮುಖ್ಯಮಂತ್ರಿಗಳು ಇಡೀ ರಾಜ್ಯದ ಆಡಳಿತ ವ್ಯವಸ್ಥೆ ಕೊರೋನಾ ನಿರ್ಮೂಲನೆಗೆ ಸಮರೋಪಾದಿಯಲ್ಲಿ ಶ್ರಮಿಸುತ್ತಿದೆ.
ನಾವು ಮನೆಯಿಂದ ಹೊರಗೆ ಅನಾವಶ್ಯಕ ಓಡಾಡಿದರೆ ಏನಾಗಬಹುದು ಎನ್ನುವುದರ ಪರಿಣಾಮವನ್ನು ಊಹಿಸಿ. ದಯಮಾಡಿ ಜಾಗರೂಕರಾಗಿರಿ. ಸಾಮಾಜಿಕ ಅಂತರವನ್ನು ಅನುಸರಿಸಿ. ನಿಮ್ಮ ಪರಿಚಿತರಾದ ಪ್ರತಿಯೊಬ್ಬರೂ ಕೋರೋನಾದ ಬಗ್ಗೆ ಮಾಹಿತಿ ಕೊಡಿ. ಮನೆಯಿಂದ ಹೊರಗೆ ಹೋಗದಂತೆ ವಿನಂತಿಸಿಕೊಳ್ಳಿ. ಕಷ್ಟ ನಮಗೆ ಮಾತ್ರವಲ್ಲ. ವಿಶ್ವದ ಹಲವು ದೇಶಕ್ಕೂ ಬಂದಿದೆ. ನಮಗಿಂತಲೂ ಶ್ರೀಮಂತ ದೇಶಗಳೂ ನಲುಗಿ ಹೋಗಿವೆ. ನಾವು ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ನಾಳೆಯನ್ನು ಊಹಿಸಲೂ ಸಾಧ್ಯವಿಲ್ಲ.
ಕ್ಷೇತ್ರದ ಶಾಸಕನಾಗಿ ನನ್ನ ಬಂಧುಗಳಾದ ಕ್ಷೇತ್ರದ ನಾಗರಿಕರೆಲ್ಲರಲ್ಲಿ ವಿನಂತಿಸುತ್ತಿದ್ದೇನೆ. ಸರಕಾರದ ಆದೇಶವನ್ನು ಪಾಲಿಸೋಣ. ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಸರಕಾರವಿದೆ. ಮನೆಯಿಂದ ಹೊರ ಹೋಗದಿರೋಣ. ಕೊರೋನಾ ನಿರ್ಮೂಲನೆಯ ಪಣ ತೊಡೋಣ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ಯು ರಾಜೇಶ್ ಕ್ಷೇತ್ರದ ಜನರಲ್ಲಿ ವಿನಮ್ರ ಮನವಿಯನ್ನು ಮಾಡಿಕೊಂಡಿದ್ದಾರೆ.
0 comments:
Post a Comment