ಬಂಟವಾಳ ಶಾಸಕ ರಾಜೇಶ್ ನಾಯ್ಕ್ |
ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಅವರ ಶಿಫಾರಸ್ಸು ಮೇರೆಗೆ ಬಂಟ್ವಾಳ ತಾಲೂಕಿನ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಳೆಹಾನಿ ಯೋಜನೆಯಡಿ ವಿವಿಧ ರಸ್ತೆಗಳ ಮರು ಡಾಮರೀಕರಣ ಕಾಮಗಾರಿಗಳಿಗೆ 14.79 ಕೋಟಿ ರೂಪಾಯಿ ಅನುದಾನ ಮಂಜೂರಾಗಿರುತ್ತದೆ. ಮಾ 14 ಹಾಗೂ 15 ರಂದು ಶಾಸಕರು ಈ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಮಾ 14 ರಂದು ಶನಿವಾರ 86 ಲಕ್ಷ ರೂಪಾಯಿ ವೆಚ್ಚದಲ್ಲಿ ಕರಿಯಂಗಳ ಗ್ರಾಮದ ಪುಂಚಮೆ-ಪಲ್ಲಿಪಾಡಿ ರಸ್ತೆ, 80 ಲಕ್ಷ ರೂಪಾಯಿ ವೆಚ್ಚದಲ್ಲಿ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು-ಕಳ್ಳಿಗೆ ರಸ್ತೆ, 1.50 ಕೋಟಿ ರೂಪಾಯಿ ವೆಚ್ಚದಲ್ಲಿ ಬಾಳ್ತಿಲ ಗ್ರಾಮದ ಸಣ್ಣಕುಕ್ಕು-ದಾಸಕೋಡಿ ರಸ್ತೆ, 1.50 ಕೋಟಿ ರೂಪಾಯಿ ವೆಚ್ಚದಲ್ಲಿ ಅನಂತಾಡಿ ಗ್ರಾಮದ ಅನಂತಾಡಿ-ಕೊಂಬಿಲ ರಸ್ತೆ, 1.70 ಲಕ್ಷ ರೂಪಾಯಿ ವೆಚ್ಚದಲ್ಲಿ ನಾವೂರು, ಸರಪಾಡಿ ಗ್ರಾಮದ ಮಣಿಹಳ್ಳ-ಅಲ್ಲಿಪಾದೆ-ಅಜಿಲಮೊಗರು ರಸ್ತೆ, 98 ಲಕ್ಷ ರೂಪಾಯಿ ವೆಚ್ಚದಲ್ಲಿ ಸರಪಾಡಿ ಗ್ರಾಮದ ಕುಂಟಾಲಪಲ್ಕೆ ರಸ್ತೆ, 65 ಲಕ್ಷ ರೂಪಾಯಿ ವೆಚ್ಚದಲ್ಲಿ ಮಣಿನಾಲ್ಕೂರು ಗ್ರಾಮದ ಗಂಡಿ ಕೊಟ್ಟಿಂಜ ರಸ್ತೆ, ಹಾಗೂ 1.35 ಕೋಟಿ ರೂಪಾಯಿ ವೆಚ್ಚದಲ್ಲಿ ಬಡಗಕಜೆಕಾರು ಗ್ರಾಮದ ನರ್ಸಿರಕುಮೇರು-ಪಾಂಡವರಕಲ್ಲು ರಸ್ತೆಗೆ ಶಿಲಾನ್ಯಾಸಗೈಯಲಿದ್ದು,
ಮಾ 15 ರಂದು ಭಾನುವಾರ 2.25 ಕೋಟಿ ರೂಪಾಯಿ ವೆಚ್ಚದಲ್ಲಿ ಕರೋಪಾಡಿ ಗ್ರಾಮದ ಒಡಿಯೂರು ಪಲ್ಲದಕೋಡಿ ಪದ್ಯಾಣ ರಸ್ತೆ, 60 ಲಕ್ಷ ರೂಪಾಯಿ ವೆಚ್ಚದಲ್ಲಿ ಕರೋಪಾಡಿ ಗ್ರಾಮದ ಅರಸೋಳಿಗೆ ರಸ್ತೆ, 2.50 ಕೋಟಿ ರೂಪಾಯಿ ವೆಚ್ಚದಲ್ಲಿ ಕೊಳ್ನಾಡು ಗ್ರಾಮದ ಕುಳಾಲು ರಸ್ತೆಗೆ ಶಾಸಕರು ಶಿಲಾನ್ಯಾಸಗೈಯಲಿದ್ದಾರೆ ಎಂದು ಶಾಸಕರ ಕಛೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment