ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮದ ಮಾರ್ನಬೈಲು ಸಮೀಪದ ಕಂದೂರು ಎಂಬಲ್ಲಿನ ಬಾರ್ ಹಿಂಭಾಗದ ಗುಡ್ಡದಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿರುವ ಅಡ್ಡೆ ಪತ್ತೆ ಹಚ್ಚಿದ ಪೊಲೀಸರು ಆರೋಪಿಗಳಾದ ಕಾರಾಜೆ ನಿವಾಸಿ ದಿನೇಶ್ ಪೂಜಾರಿ ಹಾಗೂ ಬೆಳುವಾಯಿ ನಿವಾಸಿ ಹರೀಶ್ ಎಂಬವರನನು ಬಂಧಿಸಿದ್ದು, ಸಾವಿರಾರು ರೂಪಾಯಿ ಮೌಲ್ಯದ ಸಾರಾಯಿ ವಶಕ್ಕೆ ಪಡೆದುಕೊಂಡಿದ್ದಾರೆ.
ಅಕ್ರಮವಾಗಿ ಸಾರಾಯಿ ಮಾರಾಟದ ಅಡ್ಡೆಯ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಬಂಟ್ವಾಳ ನಗರ ಠಾಣಾ ಎಸ್ಸೈ ಅವಿನಾಶ್ ನೇತೃತ್ವದ ಪೊಲೀಸರು ರೆಡ್ ಹ್ಯಾಂಡಾಗಿ ಖದೀಮರನ್ನು ಮಾಲು ಸಹಿತ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ 20 ಸಾವಿರ ರೂಪಾಯಿ ನಗದು ಹಾಗೂ 14,074/- ರೂಪಾಯಿ ಮೌಲ್ಯದ ಸಾರಾಯಿ ವಶಪಡಿಸಿಕೊಂಡಿದ್ದಾರೆ.
0 comments:
Post a Comment