ಬಂಟ್ವಾಳ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ : ಆರೋಪಿಗೆ ನ್ಯಾಯಾಂಗ ಬಂಧನ - Karavali Times ಬಂಟ್ವಾಳ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ : ಆರೋಪಿಗೆ ನ್ಯಾಯಾಂಗ ಬಂಧನ - Karavali Times

728x90

9 March 2020

ಬಂಟ್ವಾಳ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ : ಆರೋಪಿಗೆ ನ್ಯಾಯಾಂಗ ಬಂಧನ



ಬಂಟ್ವಾಳ (ಕರಾವಳಿ ಟೈಮ್ಸ್) : ಅಪ್ರಾಪ್ತ ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಟ್ವಾಳ ನಿವಾಸಿ ಮನೋಜ ಎಂಬಾತನನ್ನು ಬಂಧಿಸಿರುವ ಬಂಟ್ವಾಳ ನಗರ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮಾರ್ಚ್ 1 ರಂದು ಸಂತ್ರಸ್ಥ ಬಾಲಕಿಗೆ ಶಾಲೆಗೆ ರಜೆ ಇದ್ದು, ಮನೆಯಲ್ಲಿದ್ದ ವೇಳೆ ರಾತ್ರಿ 10 ಗಂಟೆಗೆ ಮನೆಯ ಹೊರಗಡೆ ಓದುತ್ತಿರುವ ಸಮಯ ಆರೋಪಿ ನೆರೆಮನೆ ನಿವಾಸಿ ಮನೋಜ ಬಾಲಕಿಯನ್ನು ಮನೆಯ ಹಿಂಬಾಗಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದು, ಈ ಸಂದರ್ಭ ಟಾರ್ಚ್ ಬೆಳಕು ಕಾಣಿಸಿದ್ದರಿಂದ ಆತ ಓಡಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಮಾರ್ಚ್ 6 ರಂದು ಕಲಂ 9 ಪೋಕ್ಸೋ ಆಕ್ಟ್ 2012, ಕಲಂ 354, 354  (ಎ), 354 (ಬಿ) ಐಪಿಸಿ ಮತ್ತು ಕಲಂ  3(1)ಡಬ್ಲ್ಯು(1)ಎಸ್ ಸಿ ಎಸ್ ಟಿ ಅಮೆಂಡ್‍ಮೆಂಟ್ ಆಕ್ಟ್ 2015 ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.










  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ : ಆರೋಪಿಗೆ ನ್ಯಾಯಾಂಗ ಬಂಧನ Rating: 5 Reviewed By: karavali Times
Scroll to Top