ಬಂಟ್ವಾಳ (ಕರಾವಳಿ ಟೈಮ್ಸ್) : ಜಿಲ್ಲೆಯಲ್ಲಿ ಸರಕಾರ ಲಾಕ್ ಡೌನ್ ಘೋಷಿಸಿದ ಪರಿಣಾಮ ತಾಲೂಕಿನಾದ್ಯಂತ ಸೋಮವಾರವೂ ಕಫ್ರ್ಯೂ ಪರಿಸ್ಥಿತಿ ಮುಂದುವರಿದಿತ್ತು. ತಾಲೂಕಿನ ವಿವಿಧ ಪೇಟೆ-ಪಟ್ಟಣಗಳಲ್ಲಿ ಜನರ ಸಂಚಾರವಿಲ್ಲದೆ ಬಿಕಫ ಎನ್ನುವ ಪರಿಸ್ಥಿತಿ ಇತ್ತು. ಸಾರಿಗೆ ವಾಹನಗಳಾದ ಸರಕಾರಿ ಹಾಗೂ ಖಾಸಗಿ ಬಸ್ಸುಗಳು ಸಂಚಾರ ನಿಲ್ಲಿಸಿದ್ದವು. ಅಗತ್ಯ ಸೇವೆಗಳಿಗೆ ಮಾತ್ರ ಜನರ ಅತ್ತಿಂದಿತ್ತ ಓಡಾಡುತ್ತಿದ್ದುದು ಕಂಡು ಬಂತು. ಕೆಲವೆಡೆ ತೆರೆದಿದ್ದ ಅಂಗಡಿ-ಮುಂಗಟ್ಟುಗಳನ್ನು ಮಧ್ಯಾಹ್ನದ ವೇಳಗೆ ಪೊಲೀಸರೇ ಬಲವಂತವಾಗಿ ಮುಚ್ಚಿಸಿದ್ದಾರೆ. ಮಂಗಳೂರು ಕಡೆ ತೆರಳುತ್ತಿದ್ದ ಸಾರ್ವಜನಿಕರನ್ನು ಪೊಲೀಸರು ಫರಂಗಿಪೇಟೆ ಬಳಿ ತಡೆಹಿಡಿದು ವಾಪಾಸು ಕಳುಹಿಸುತ್ತಿದ್ದ ದೃಶ್ಯವೂ ಕಂಡುಬಂತು. ಒಟ್ಟಿನಲ್ಲಿ ಕೊರೊನಾ ಜನತಾ ಕಫ್ರ್ಯೂ ಪರಿಸ್ಥಿತಿ ಬಂಟ್ವಾಳದಲ್ಲಿ ಸೋಮವಾರವೂ ಮುಂದುವರಿದಿತ್ತು.
ಲಾಕ್ ಡೌನ್ ಇಫೆಕ್ಟ್ : ಸೋಮವಾರವೂ ಬಂಟ್ವಾಳ ಸ್ಥಬ್ಧ

0 comments:
Post a Comment