ತುಳುನಾಡಿನ ಸಂಸ್ಕೃತಿ ಪರಂಪರೆ ಉಳಿಸಲು ಶ್ರಮಿಸಿ : ಸಹನಾ ಕುಂದರ್ - Karavali Times ತುಳುನಾಡಿನ ಸಂಸ್ಕೃತಿ ಪರಂಪರೆ ಉಳಿಸಲು ಶ್ರಮಿಸಿ : ಸಹನಾ ಕುಂದರ್ - Karavali Times

728x90

11 March 2020

ತುಳುನಾಡಿನ ಸಂಸ್ಕೃತಿ ಪರಂಪರೆ ಉಳಿಸಲು ಶ್ರಮಿಸಿ : ಸಹನಾ ಕುಂದರ್



ಬಂಟ್ವಾಳ (ಕರಾವಳಿ ಟೈಮ್ಸ್) : ಯುವಜನತೆ ಪಾಶ್ಚಾತ್ಯ ಸಂಸ್ಕೃತಿಗೆ ಆಕರ್ಷಿತರಾಗುವ ಬದಲು ಧಾರ್ಮಿಕತೆ ಮತ್ತು ಗುರು ಹಿರಿಯರಿಗೆ ಗೌರವ ನೀಡುವ ತುಳುನಾಡಿನ ಶ್ರೇಷ್ಟ ಪರಂಪರೆ ಉಳಿಸಿಕೊಳ್ಳಲು ಶ್ರಮಿಸಬೇಕು ಎಂದು ವಕೀಲೆ ಸಹನಾ ಕುಂದರ್ ಸೂಡ ಸಲಹೆ ನೀಡಿದ್ದಾರೆ.

ಅಮ್ಟಾಡಿ ಗ್ರಾಮದ ಪಚ್ಚಿನಡ್ಕ ಮಾತೃಭೂಮಿ ಗೆಳೆಯರ ಬಳಗ ವತಿಯಿಂದ ಏರ್ಪಡಿಸಲಾಗಿದ್ದ 9ನೇ ವಾರ್ಷಿಕೋತ್ಸವ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಉದ್ಯಮಿ ಕೆ. ಸೇಸಪ್ಪ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು. ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಜಗದೀಶ ನೆತ್ರಕೆರೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್, ನ್ಯಾಯವಾದಿ ಅರುಣ್ ರೋಶನ್ ಡಿ’ಸೋಜ, ಮಂಗಳೂರು ಶ್ರೀರಾಮ ಸೇನೆ ಮುಖಂಡ ಹರೀಶ ಅಮ್ಟಾಡಿ ಶುಭ ಹಾರೈಸಿದರು.

ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ತಾ.ಪಂ. ಸದಸ್ಯ ಯಶವಂತ ಪೆÇಳಲಿ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಶೆಟ್ಟಿ ಬಟ್ಟತ್ತೋಡಿ, ವಕೀಲ ಪ್ರದೀಪ್ ಎನ್.ಕೆ., ಗುತ್ತಿಗೆದಾರ ಯಶೋಧರ ಪೆÇಳಲಿ, ಉದ್ಯಮಿ ಉಮೇಶ ಸಾಲ್ಯಾನ್, ಪ್ರಮುಖರಾದ ರತ್ನಾಕರ ಶೆಟ್ಟಿ ಕಲ್ಲಡ್ಕ, ಭುವನೇಶ್ ಪಚ್ಚಿನಡ್ಕ, ಆನಂದ ಶಂಭೂರು ಮೊದಲಾದವರು ಭಾಗವಹಿಸಿದ್ದರು.

ಇದೇ ವೇಳೆ ಶ್ರೀರಾಮ ಸೇನೆ ಮುಖಂಡ ಹರೀಶ ಅಮ್ಟಾಡಿ, ಗ್ರಾ.ಪಂ. ಸದಸ್ಯರಾದ ಹರೀಶ ಶೆಟ್ಟಿ ಅಮ್ಟಾಡಿ, ಬಬಿತಾ ಕೋಟ್ಯಾನ್, ಜಯಂತಿ ಅವರನ್ನು ಸನ್ಮಾನಿಸಲಾಯಿತು. ಶೇಖರ ಶೆಟ್ಟಿ ಅಮ್ಟಾಡಿ ಸ್ವಾಗತಿಸಿ, ನರಸಿಂಹ ಶೆಟ್ಟಿ ಮಾಣಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.













  • Blogger Comments
  • Facebook Comments

0 comments:

Post a Comment

Item Reviewed: ತುಳುನಾಡಿನ ಸಂಸ್ಕೃತಿ ಪರಂಪರೆ ಉಳಿಸಲು ಶ್ರಮಿಸಿ : ಸಹನಾ ಕುಂದರ್ Rating: 5 Reviewed By: karavali Times
Scroll to Top