ಬಂಟ್ವಾಳ (ಕರಾವಳಿ ಟೈಮ್ಸ್) : ಕೇಂದ್ರ ಜುಮಾ ಮಸೀದಿ ಅಕ್ಕರಂಗಡಿ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಮಖಾಂ ಉರೂಸ್ ಹಾಗೂ 4 ದಿನಗಳ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವು ಮಾರ್ಚ್ 25 ರಿಂದ 28ರವರೆಗೆ ಇಲ್ಲಿನ ಹಿದಾಯತುಲ್ ಇಸ್ಲಾಂ ಮದ್ರಸ ವಠಾರದಲ್ಲಿ ನಡೆಯಲಿದೆ.
ಮಾ 25 ರಂದು ಶೈಖುನಾ ಅಸ್ಗರ್ ಫೈಝಿ ಬೆಳ್ಳೂರು ಉದ್ಘಾಟಿಸಲಿದ್ದು, ಮಸೀದಿ ಅಧ್ಯಕ್ಷ ಅಬ್ದುಲ್ ಹಮೀದ್ ಬಾವುಂಞÂ ಅಧ್ಯಕ್ಷತೆ ವಹಿಸುವರು. ಮಿತ್ತಬೈಲು ಮುದರ್ರಿಸ್ ಉಮರುಲ್ ಫಾರೂಕ್ ಫೈಝಿ ‘ಸಜ್ಜನರ ಹಾದಿ’ ಎಂಬ ವಿಷಯದಲ್ಲಿ ಮುಖ್ಯ ಭಾಷಣಗೈಯುವರು.
ಮಾ 26 ಹಾಗೂ 27 ರಂದು ಕ್ರಮವಾಗಿ ಕೋಟ್ಟಿಕುಳಂ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ಅಶ್ರಫಿ ಪಾಣತ್ತೂರು ಹಾಗೂ ಅಕ್ಕರಂಗಡಿ ಮಸೀದಿ ಮುದರ್ರಿಸ್ ಆರಿಫ್ ಬಾಖವಿ ಅವರು ಉಪನ್ಯಾಸಗೈಯುವರು.
ಮಾ 28 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಸಯ್ಯಿದ್ ಸಫ್ವಾನ್ ತಂಙಳ್ ಎಝಮಲ, ಕೇರಳ ಅವರು ದುವಾಶಿರ್ವಚನಗೈಯಲಿದ್ದು, ಸಮಸ್ತ ಮುಶಾವರ ಸದಸ್ಯ ಹಾಜಿ ಅಬ್ದುಲ್ ಖಾದರ್ ಮುಸ್ಲಿಯಾರ್ ಅಲ್-ಖಾಸಿಮಿ ಬಂಬ್ರಾಣ ಉದ್ಘಾಟಿಸುವರು. ಕಾಸರಗೋಡು-ಉಳಿಯತ್ತಡ್ಕ ಜುಮಾ ಮಸೀದಿ ಖತೀಬ್ ಅಶ್ಫಕ್ ಫೈಝಿ ನಂದಾವರ ಮುಖ್ಯ ಭಾಷಣಗೈಯುವರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ಪುರಸಭಾ ಸದಸ್ಯ ಇದ್ರೀಸ್ ಪಿ.ಜೆ., ಕಲ್ಲಡ್ಕ ಮಸೀದಿ ಮುದರ್ರಿಸ್ ಶೈಖ್ ಮುಹಮ್ಮದ್ ಇರ್ಫಾನಿ, ಸಜಿಪ ಕೇಂದ್ರ ಜುಮಾ ಮಸೀದಿ ಖತೀಬ್ ಅಬೂಸ್ವಾಲಿಹ್ ಫೈಝಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಹರೇಕಳ ಹಾಜಬ್ಬ, ಉದ್ಯಮಿಗಳಾದ ಹಾಜಿ ಹಫೀಝ್, ಅಬ್ದುಲ್ ಲತೀಫ್ ಸಫಾ ಕಾರಾಜೆ, ಪಿ.ಜೆ. ಯೂಸುಫ್ ಹಾಜಿ, ಹಾಜಿ ಜೆ. ಸೈಫುದ್ದೀನ್ ನಝರ್, ನಿವೃತ್ತ ಮುಖ್ಯೋಪಾಧ್ಯಾಯ ಹಾಜಿ ಫಕ್ರುದ್ದೀನ್ ಮಾಸ್ಟರ್, ಅಕ್ಕರಂಗಡಿ ದಾರುಲ್ ಇಸ್ಲಾಂ ಶಾಲೆಯ ಮುಖ್ಯೋಪಾಧ್ಯಾಯ ಅಬ್ದುಲ್ ಹಮೀದ್, ಬಶೀರುದ್ದೀನ್ ಅನ್ವರ್, ಸಿ.ಪಿ. ಆದಂ ಹಾಜಿ ತವಕ್ಕಲ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಮಸೀದಿ ಪ್ರಕಟಣೆ ತಿಳಿಸಿದೆ.
0 comments:
Post a Comment