ನವದೆಹಲಿ (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ ದೇಶಾದ್ಯಂತ ನಿಲ್ಲಿಸಲಾಗಿದ್ದ ದೇಶಿ ವಿಮಾನಗಳ ಹಾರಾಟದ ಮೇಲಿನ ನಿಷೇಧವನ್ನು ಪ್ರಿಲ್ 14ರವರೆಗೆ ವಿಸ್ತರಿಸಲಾಗಿದೆ.
ಮಾರ್ಚ್ 31ರವರೆಗೆ ಜಾರಿಯಲ್ಲಿದ್ದ ದೇಶಿ ವಿಮಾನಗಳ ಹಾರಾಟ ನಿಷೇಧವನ್ನು ಎಪ್ರಿಲ್ 14ವರೆಗೆ ವಿಸ್ತರಿಸಿ ನಾಗರಿಕ ವಿಮಾನಯಾನ ನಿರ್ದೇಶನಾಲಯ ಶುಕ್ರವಾರ ಆದೇಶ ಹೊರಡಿಸಿದೆ.
ಈಗಾಗಲೇ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಏಪ್ರಿಲ್ 15 ರವರೆಗೆ ಸ್ಥಗಿತಗೊಳಿಸಲಾಗಿದೆ. ಇದೀಗ ಇದೇ ಸಾಲಿಗೆ ದೇಶಿ ವಿಮಾನಗಳ ಹಾರಾಟವೂ ಸೇರ್ಪಡೆಗೊಳಿಸಲಾಗಿದೆ.
ಈಗಾಗಲೇ ರೈಲ್ವೆ ಇಲಾಖೆ ಕೂಡಾ ಎಲ್ಲಾ ಪ್ರಯಾಣಿಕ ರೈಲುಗಳನ್ನು ಎಪ್ರಿಲ್ 14ರವರೆಗೆ ರದ್ದುಗೊಳಿಸಿದೆ. ಕೇವಲ ಸರಕು ಸಾಗಣೆ ರೈಲುಗಳು ಮಾತ್ರ ರಾಜ್ಯ ರಾಜ್ಯಗಳ ನಡುವೆ ಓಡಾಟ ನಡೆಸುತ್ತಿವೆ. ಹೆಚ್ಚು ಕಡಿಮೆ ಎಲ್ಲಾ ರಾಜ್ಯಗಳು ಅಂತಾರಾಜ್ಯ ವಾಹನಗಳ ಓಡಾಟವನ್ನು ಸ್ಥಗಿತಗೊಳಿಸಿದ್ದು, ಕೇವಲ ಅಗತ್ಯ ಸರಕುಗಳನ್ನು ಹೊತ್ತ ವಾಹನಗಳ ಓಡಾಟಕ್ಕೆ ಮಾತ್ರ ಅನುಮತಿ ನೀಡಲಾಗಿದೆ.
0 comments:
Post a Comment