ಬಂಟ್ವಾಳ (ಕರಾವಳಿ ಟೈಮ್ಸ್) : ಕೋವಿಡ್-19 ಕೊರೋನ ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿರುವಂತಹ ಈ ಸಂದರ್ಭದಲ್ಲಿ ಸರಕಾರವು ಇಡೀ ದೇಶವನ್ನೇ ಲಾಕ್ ಡೌನ್ ಮಾಡಿರುವುದರಿಂದ ದುಡಿಯುವ ವರ್ಗವು ಇಂದು ಒಪೆÇ್ಪತ್ತಿನ ಅನ್ನಕ್ಕೂ ಪರದಾಡುವಂತಾಗಿದೆ, ದಿನಗೂಲಿ ನೌಕರರು ಹಾಗೂ ಮದ್ಯಮ ವರ್ಗದ ಜನರು ದುಡಿಮೆಯೂ ಇಲ್ಲದೇ ಆಹಾರ ಸಾಮಾಗ್ರಿಗಳನ್ನೂ ಖರೀದಿ ಮಾಡಲು ಆಗದೇ ಅದೆಷ್ಟೋ ಕುಟುಂಬಗಳು ಪರದಾಡುತ್ತಿವೆ. ಬಡತನ ರೇಖೆಯಿಂದ ಕೆಳಗಿನವರನ್ನು ಸಂಘ ಸಂಸ್ಥೆಗಳು ಗುರುತಿಸಿ ಅವರಿಗೆ ಬೇಕಾಗುವ ಆಹಾರ
ಸಾಮಾಗ್ರಿಗಳನ್ನು ನೀಡುತ್ತಿವೆ, ಆದರೆ ಮದ್ಯಮ ವರ್ಗದ ಜನರು ಸಂಘ ಸಂಸ್ಥೆಗಳ ಮುಂದೆ ಕೈಯೊಡ್ಡಲಾಗದೇ ಇತ್ತ ಆಹಾರ ಸಾಮಾಗ್ರಿಗಳನ್ನು ಕೊಂಡುಕೊಳ್ಳುವಂತಹಾ ಆರ್ಥಿಕ ವ್ಯವಸ್ಥೆಯಿಲ್ಲದೇ ಪರದಾಡುತ್ತಿವೆ, ಈ ಬಗ್ಗೆ ಆಯಾ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳುವ ಮೂಲಕ ಹಸಿವು ಮುಕ್ತ ಸಮಾಜವನ್ನು ನಿರ್ಮಾಣ ಮಾಡಬೇಕಿದೆ ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಉಪಾಧ್ಯಕ್ಷ ಎಸ್. ಅಬೂಬಕ್ಕರ್ ಸಜಿಪ ಅಭಿಪ್ರಾಯಪಟ್ಟಿದ್ದಾರೆ.
0 comments:
Post a Comment