ಬಂಟ್ವಾಳ (ಕರಾವಳಿ ಟೈಮ್ಸ್) : ದೇಶದಲ್ಲಿ ಕೊರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆತಂಕವನ್ನು ಸೃಷ್ಟಿಸಿದೆ. ಮಾರಕ ವೈರಸ್ ನಿಯಂತ್ರಣದ ಹಿನ್ನಲೆಯಲ್ಲಿ ಸ್ವಯಂ ನಿಯಂತ್ರಣ ಸಾಧಿಸಿಕೊಳ್ಳುವುದು ಜೀವ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಅನಿವಾರ್ಯವಾಗಿದೆ ಎಂದು ಬಂಟ್ವಾಳ ತಾ.ಪಂ. ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ ಜನತೆಗೆ ಕರೆ ನೀಡಿದ್ದಾರೆ.
ಸರಕಾರ ಹಾಗೂ ಆರೋಗ್ಯ ಇಲಾಖೆ ಕೈಗೊಳ್ಳುವ ಎಲ್ಲಾ ನಿರ್ಬಂಧ ಕ್ರಮಗಳು ಜನರ ಜೀವ ರಕ್ಷಣೆಗಾಗಿದೆಯೇ ಹೊರತು ಜನರ ಅನಾನುಕೂಲತೆಗೆ ಅಲ್ಲ ಎಂಬುದನ್ನು ಮನಗಂಡು ಜನ ಸ್ವಯಂ ನಿಯಂತ್ರಣ ಸಾಧಿಸಬೇಕಾಗಿದೆ. ಜನರ ಚಲನವಲನಗಳನ್ನು ನಿಯಂತ್ರಿಸುವುದು ಕಷ್ಟವಾದರೂ ಅನಿವಾರ್ಯವಾಗಿ ಸರಕಾರಗಳಿಗೆ ತಮ್ಮ ಪ್ರಜೆಗಳ ಜೀವ ರಕ್ಷಣೆಗಾಗಿ ಅನಿವಾರ್ಯವಾಗಿ ಬಲವಂತವಾಗಿಯಾದರೂ ನಿಯಂತ್ರಿಸಬೇಕಾದ ಅನಿವಾರ್ಯತೆ ಇದೆ. ಪರಿಸ್ಥಿತಿಯ ಅನಿವಾರ್ಯತೆ ಮನಗಂಡು ಜನ ಸರಕಾರ ಹಾಗೂ ಇಲಾಖೆಗಳೊಂದಿಗೆ, ಅಧಿಕಾರಿ ವರ್ಗದೊಂದಿಗೆ ಸಹಕಾರ ಮನೋಭಾವ ತೋರಬೇಕು ಎಂದಿರುವ ಅಬ್ಬಾಸ್ ಅಲಿ ಬಂದ್ ಹಾಗೂ ನಿರ್ಬಂಧಿತ ಅವಧಿಯಲ್ಲಿ ಅನುಕೂಲಸ್ಥರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುವ ಮೂಲಕ ಬಡವರ, ನಿರ್ಗತಿಕರ ಸೇವೆಯನ್ನು ನಿರ್ವಹಿಸುವುದರೊಂದಿಗೆ ದೇವರ ಪ್ರೀತಿಗೆ ಪಾತ್ರರಾಗಬೇಕು ಎಂದಿದ್ದಾರೆ.
0 comments:
Post a Comment