ಲಿಂಕ್ ಮಾಡದಿದ್ದಲ್ಲಿ ಪಾನ್ ಕಾರ್ಡ್ ನಿಷ್ಕ್ರಿಯ
ನಿಷ್ಕ್ರಿಯ ಪಾನ್ ಕಾರ್ಡ್ ಬಳಕೆಗೆ 10 ಸಾವಿರ ದಂಡ?
ನವದೆಹಲಿ (ಕರಾವಳಿ ಟೈಮ್ಸ್) : ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31 ಕೊನೆ ದಿನಾಂಕವಾಗಿದ್ದು, ಅದರೊಳಗೆ ಲಿಂಕ್ ಮಾಡಲಿ ಆದಾಯ ತೆರಿಗೆ ಇಲಾಖೆ ಸೂಚಿಸಿದೆ. ತಪ್ಪಿದಲ್ಲಿ ನಿಷ್ಕ್ರಿಯ ಪಾನ್ ಕಾರ್ಡ್ ಬಳಸಿದ್ದಕ್ಕಾಗಿ ಆದಾಯ ತೆರಿಗೆ ಇಲಾಖೆ ಬಳಕೆದಾರನ ಮೇಲೆ 10 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ತಿಳಿಸಿದೆ.
ಆಧಾರ್ ಕಾರ್ಡಿಗೆ ಪಾನ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಮಾಡಬೇಕು. ತಪ್ಪಿದಲ್ಲಿ ಅಂತಹ ಪಾನ್ ಕಾರ್ಡ್ ಅಮಾನ್ಯವಾಗಲಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139ಎಎ ಅಡಿಯಲ್ಲಿ ಆಧಾರ್ ನೊಂದಿಗೆ ಜೋಡಣೆಯಾಗದ ಪಾನ್ ಸಂಖ್ಯೆಯನ್ನು ಅಮಾನ್ಯ ಎಂದು ಪರಿಗಣಿಸಲಾಗುತ್ತದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ 2018 ರಿಂದ ಘೋಷಿಸಿದೆ.
ಅದರಂತೆ ಆಧಾರ್-ಪಾನ್ ಕಾರ್ಡ್ ಲಿಂಕ್ ಮಾಡದೇ ಇರುವ ಗ್ರಾಹಕರಿಗೆ ಸಮಯಾವಕಾಶವನ್ನು ನೀಡಿತ್ತು. ಮಾರ್ಚ್ 31 ರ ಒಳಗೆ ಲಿಂಕ್ ಮಾಡಿಕೊಳ್ಳುವಂತೆ ಸೂಚಿಸಿತ್ತು. ಪಾನ್ ಕಾರ್ಡ್ ಆಧಾರ್ ನೊಂದಿಗೆ ಲಿಂಕ್ ಆಗದಿದ್ದರೆ, ಆನ್ ಲೈನ್ ನಲ್ಲಿ ಐಟಿ ಸಲ್ಲಿಸಲಾಗುವುದಿಲ್ಲ. ಇದರಿಂದ ತೆರಿಗೆ ಮರುಪಾವತಿ ಸಮಸ್ಯೆ ಉಂಟಾಗಲಿದೆ. ಹಾಗೆಯೇ ಪಾನ್ ಕಾರ್ಡ್ ಅಮಾನ್ಯವಾಗಲಿದೆ ಎನ್ನಲಾಗುತ್ತಿದೆ.
ಮಾರ್ಚ್ 31 ರ ಗಡುವಿನೊಳಗೆ ಪಾನ್ ಕಾರ್ಡ್-ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದಲ್ಲಿ ಆದಾಯ ತೆರಿಗೆ ಇಲಾಖೆಯು ನಿಷ್ಕ್ರಿಯ ಶಾಶ್ವತ ಖಾತೆ ಸಂಖ್ಯೆ ಬಳಸಿದ್ದಕ್ಕಾಗಿ ಪಾನ್ ಕಾರ್ಡ್ ಬಳಕೆದಾರನ ಮೇಲೆ 10 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ತಿಳಿಸಿದೆ.
0 comments:
Post a Comment