ಆಲಡ್ಕ ಪ್ರೀಮಿಯರ್ ಲೀಗ್ ಸೀಸನ್-4 ಕ್ರಿಕೆಟ್ ಕೂಟಕ್ಕೆ ಅದ್ದೂರಿ ತೆರೆ
ಎ ಟು ಝಡ್ ತಂಡಕ್ಕೆ ಚಾಂಪಿಯನ್ ಪಟ್ಟ
ಬಂಟ್ವಾಳ (ಕರಾವಳಿ ಟೈಮ್ಸ್) : ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಯುವಕರು ಯಾವತ್ತೂ ದುಶ್ಚಟಗಳಿಂದ ದೂರವಾಗಿರುತ್ತಾರೆ ಹಾಗೂ ಸಮಾಜ ಬಾಹಿರ ಚಟುವಟಿಕೆಗಳಿಂದಲೂ ದೂರವಾಗಿರುತ್ತಾರೆ ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಹೇಳಿದರು.
ಭೂಯಾ ಗೈಸ್ ಸ್ಪೋಟ್ರ್ಸ್ ಕ್ಲಬ್ ಆಲಡ್ಕ-ಪಾಣೆಮಂಗಳೂರು ಆಲಡ್ಕ ಮೈದಾನದಲ್ಲಿ ಆಯೋಜಿಸಿದ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ 4ನೇ ಆವೃತ್ತಿಯ ಆಲಡ್ಕ ಪ್ರೀಮಿಯರ್ ಲೀಗ್ (ಎಪಿಎಲ್) ಕ್ರೀಡಾಕೂಟದ ವಿಜೇತರಿಗೆ ಭಾನುವಾರ ಸಂಜೆ ಬಹುಮಾನ ವಿತರಿಸಿ ಮಾತನಾಡಿದ ಅವರು ಯುವಕರು ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೆ ಕ್ರೀಡಾ ಸ್ಪೂರ್ತಿಯ ಜೊತೆಗೆ ಭವಿಷ್ಯವನ್ನು ಕಂಡುಕೊಳ್ಳಲೂ ಸಾಧ್ಯವಿದೆ ಎಂದರು.
ಸಮಾಜದಲ್ಲಿ ಎಲ್ಲ ವರ್ಗ, ಜಾತಿ-ಧರ್ಮದ ಜನ ಪರಸ್ಪರ ಶಾಂತಿ-ಸೌಹಾರ್ದತೆ, ಸಾಮರಸ್ಯವನ್ನು ಮೆರೆಯುವ ಏಕೈಕ ಕ್ಷೇತ್ರವಾಗಿ ಇಂದು ಕ್ರೀಡಾಕ್ಷೇತ್ರ ಇನ್ನೂ ಉಳಿದುಕೊಂಡಿದೆ. ಯುವ ಸಮೂಹ ಕ್ರೀಡಾ ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರಿಯವಾಗೊ ತೊಡಗಿಸಿಕೊಳ್ಳುವ ಮೂಲಕ ಸಾಮಾಜಿಕ ಸಾಮರಸ್ಯವನ್ನು ಉಳಿಸುವಲ್ಲಿ ಮಹತ್ತರ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು.
ಮಾಜಿ ಸಚಿವ ಬಿ. ರಮಾನಾಥ ರೈ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ತಾ.ಪಂ. ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಕಾರ್ಯದರ್ಶಿ ಮುಹಮ್ಮದ್ ನಂದಾವರ, ಪಾಣೆಮಂಗಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಜೆಟಿಟಿ, ಉದ್ಯಮಿಗಳಾದ ಅಹ್ಮದ್ ಬಾವಾ ಯಾಸೀನ್, ಅಬ್ದುಲ್ ರಹಿಮಾನ್ ಮೋನು, ಅಬ್ದುಲ್ ಹಕೀಂ ಉಲ್ಲಾಸ್, ಮುಹಮ್ಮದ್ ಹನೀಫ್ ಬೋಳಂಗಡಿ, ರಫೀಕ್ ಎಂ.ಆರ್. ಬೋಗೋಡಿ, ಫಾರೂಕ್ ಭೂಯಾ, ಉಂಞ ಬಂಗ್ಲೆಗುಡ್ಡೆ, ಶರೀಫ್ ಆಲಡ್ಕ, ಇಸ್ಮಾಯಿಲ್ ಯು. ಮೊದಲಾದವರು ಭಾಗವಹಿಸಿದ್ದರು.
ಭೂಯಾ ಸ್ಪೋಟ್ರ್ಸ್ ಕ್ಲಬ್ ಪ್ರಮುಖರಾದ ಹಬೀಬ್ ಬೋಗೋಡಿ, ಅಝ್ಮಲ್, ಶಫೀಕ್, ರಿಯಾಝ್ ಆಲಡ್ಕ, ಇರ್ಶಾದ್, ಮುಸ್ತಫಾ ಪಿ.ಜೆ., ಕೈಫ್ ಬೋಗೋಡಿ, ದಾವೂದ್ ಬೋಗೋಡಿ, ಅಶ್ರಫ್ ಯು., ಝುಬೈ ಬಂಗ್ಲೆಗುಡ್ಡೆ, ಅಝರ್ ಯು., ಮನ್ಸೂರ್ ಬಂಗ್ಲೆಗುಡ್ಡೆ, ಮುಹಮ್ಮದ್ ರಫೀಕ್ ಮಮ್ಮು ಮೊದಲಾದವರು ಉಪಸ್ಥಿತರಿದ್ದರು.
ಎ ಟು ಝಡ್ ತಂಡಕ್ಕೆ ಚಾಂಪಿಯನ್ ಪಟ್ಟ
ಕ್ರೀಡಾ ಕೂಟದಲ್ಲಿ ಖಲಂದರ್ ರಿಯಾಝ್ ಮಾಲಕತ್ವದ ಎ ಟು ಝಡ್ ತಂಡ ಫೈನಲ್ ಪಂದ್ಯದಲ್ಲಿ ಬೀಯಿಂಗ್ ಭೂಯಾ ತಂಡವನ್ನು ಪರಾಭವಗೊಳಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಬೀಯಿಂಗ್ ಭೂಯಾ ತಂಡದ ಶರತ್ ಸರಣಿ ಪ್ರಶಸ್ತಿ ಪಡೆದುಕೊಂಡರೆ, ಅ ಟು ಝಡ್ ತಂಡದ ಆಟಗಾರರಾದ ಸಿದ್ದೀಕ್ ಪಿ.ಜೆ. ಉತ್ತಮ ಎಸೆತಗಾರ, ಶಾನವಾಝ್ ಉತ್ತಮ ದಾಂಡುಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ರಿಝ್ವಾನ್ ಪಿ.ಜೆ. ಮಾಲಕತ್ವದ ಪಿ.ಜೆ. ಸ್ಟಾರ್ಸ್ ತಂಡ ಶಿಸ್ತಿನ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು.
ಭೂಯಾ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಶರೀಫ್ ಭೂಯಾ ಸ್ವಾಗತಿಸಿ, ಅಝರ್ ಭೂಯಾ ವಂದಿಸಿದರು. ಪತ್ರಕರ್ತ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ಸಚಿನ್ ಬಂಟ್ವಾಳ ಹಾಗೂ ಪ್ರಸಾದ್ ಬಂಟ್ವಾಳ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರೆ, ಹಸೈನಾರ್ ಪಾಣೆಮಂಗಳೂರು ವೀಕ್ಷಕ ವಿವರಣೆಗಾರರಾಗಿ ಸಹಕರಿಸಿದರು.
0 comments:
Post a Comment