ಬಂಟ್ವಾಳ (ಕರಾವಳಿ ಟೈಮ್ಸ್) : ಭೂಯಾ ಗೈಸ್ ಸ್ಪೋಟ್ರ್ಸ್ ಕ್ಲಬ್ ಆಲಡ್ಕ-ಪಾಣೆಮಂಗಳೂರು ಆಲಡ್ಕ ಮೈದಾನದಲ್ಲಿ ಆಯೋಜಿಸಿರುವ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ 4ನೇ ಆವೃತ್ತಿಯ ಆಲಡ್ಕ ಪ್ರೀಮಿಯರ್ ಲೀಗ್ (ಎಪಿಎಲ್) ಟೂರ್ನಮೆಂಟಿನ ಅಂತಿಮ ಸುತ್ತಿನ ಪಂದ್ಯಗಳು ನಾಳೆ (ಮಾ 8) ನಡೆಯಲಿದೆ.
ಚಾಂಪಿಯನ್ ತಂಡಕ್ಕೆ ಮಾಜಿ ಸಚಿವ ಬಿ. ರಮಾನಾಥ ರೈ ಬಹುಮಾನ ವಿತರಿಸುವರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ರೇಂಜ್ ಫಾರೆಸ್ಟ್ ಆಫೀಸರ್ ಪ್ರೀತಂ, ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರುಗಳಾದ ಬೇಬಿ ಕುಂದರ್ ಹಾಗೂ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಬಂಟ್ವಾಳ ತಾ ಪಂ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪುರಸಭಾ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಹಸೈನಾರ್ ಶಾಂತಿಅಂಗಡಿ, ಪಾಣೆಮಂಗಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಜೆಟಿಟಿ, ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಉಪಾಧ್ಯಕ್ಷ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಇರಾ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಜಿಲ್ಲಾ ಮಾನವ ಹಕ್ಕುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಇಕ್ಬಾಲ್ ಪರ್ಲಿಯ, ಉದ್ಯಮಿಗಳಾದ ಹಾಜಿ ಮುಹಮ್ಮದ್ ರಫೀಕ್, ಅಹ್ಮದ್ ಬಾವಾ ಯಾಸೀನ್, ರವಳನಾಥ ನಾಯಕ್ ಮೆಲ್ಕಾರ್, ಬ್ರಾಯಾನ್ ಲಾರಾ ಮೆಲ್ಕಾರ್, ಉಂಞ ಬಂಗ್ಲೆಗುಡ್ಡೆ ಹಾಗೂ ಮಂಗಳೂರು ಟೀಂ 180 ಪ್ರಮುಖರು ಭಾಗವಹಿಸಲಿದ್ದಾರೆ.
ಖಲಂದರ್ ರಿಯಾಝ್ ಮಾಲಕತ್ವದ ಎ ಟು ಝಡ್ ತಂಡ ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದುಕೊಂಡು 8 ಅಂಕಗಳನ್ನು ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ರಶೀದ್ ಮಾಲಕತ್ವದ ಕತಾರ್ ವಾರಿಯರ್ಸ್ ಎರಡು ಪಂದ್ಯಗಳಲ್ಲಿ ಜಯ ಹಾಗೂ ಒಂದು ಟೈ ಮೂಲಕ 5 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಾಗಿ ಗುರುತಿಸಿಕೊಂಡಿದೆ.
ಉಳಿದಂತೆ ಇಖ್‍ಲಾಸ್ ಸ್ಟ್ರೈಕರ್ಸ್ 2 ಜಯ, 2 ಸೋಲಿನೊಂದಿಗೆ 4 ಅಂಕಗಳನ್ನು ಗಿಟ್ಟಿಸಿಕೊಂಡು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಬೀಯಿಂಗ್ ಭೂಯಾ 2 ಸೋಲು, ಒಂದು ಜಯ ಹಾಗೂ ಒಂದು ಟೈ ಯೊಂದಿಗೆ 3 ಅಂಕಗಳೊಂದಿಗೆ ಪ್ರಶಸ್ತಿ ಸುತ್ತು ಪ್ರವೇಶಿಸಲು ತೀವ್ರ ಹೋರಾಟ ನಡೆಸುವ ಚಿಂತನೆ ನಡೆಸುತ್ತಿದೆ.
ಪಿ. ಜೆ. ಸ್ಟಾರ್ಸ್ ಒಂದು ಜಯ, 2 ಸೋಲಿನೊಂದಿಗೆ 2 ಅಂಕಗಳು ಹಾಗೂ ಲ್ಯಾನ್ಸರ್ ಲೀಫ್ಸ್ ಮೂರು ಸೋಲು ಹಾಗೂ 1 ಜಯದೊಂದಿಗೆ ಅಂಕಪಟ್ಟಿಯಲ್ಲಿ 2 ಅಂಕಗಳನ್ನು ಗಳಿಸಿದೆ.
ಕತಾರ್ ವಾರಿಯರ್ಸ್ ತಂಡ ಅನ್ಸಾರ್ 5 ಪಂದ್ಯಗಳಿಂದ 8 ವಿಕೆಟ್ ಹಾಗೂ ಎ ಟು ಝಡ್ ತಂಡ ಸಿದ್ದೀಕ್ 4 ಪಂದ್ಯಗಳಿಂದ 7 ವಿಕೆಟ್, ಶಾನವಾಝ್ 4 ಪಂದ್ಯಗಳಿಂದ 6 ವಿಕೆಟ್, ಲ್ಯಾನ್ಸರ್ ಲೀಫ್ಸ್ ತಂಡದ ಸಂದೀಪ್ 4 ಪಂದ್ಯಗಳಿಂದ 5 ವಿಕೆಟ್ ಹಾಗೂ ಇತರ ನಾಲ್ಕು ಮಂದಿ ಬೌಲರ್‍ಗಳು ತಲಾ 4 ವಿಕೆಟ್ ಪಡೆಯುವ ಮೂಲಕ ವಿಕೆಟ್ ಗಳಿಕೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ,
ಸ್ಕೋರರ್ ಪಟ್ಟಿಯಲ್ಲಿ ಪಿ.ಜೆ. ಸ್ಟಾರ್ಸ್ ತಂಡದ ಅಝ್ಮಲ್ 2 ಪಂದ್ಯಗಳಿಂದ 49, ಎ ಟು ಝಡ್ ತಂಡದ ಶಫೀಕ್ 4 ಪಂದ್ಯಗಳಿಂದ 45, ಬೀಯಿಂಗ್ ಭೂಯಾ ತಂಡದ ಶರತ್ 4 ಪಂದ್ಯಗಳಿಂದ 39, ಫಯಾಝ್ 36, ಎ ಟು ಝಡ್ ತಂಡದ ಶಾನವಾಝ್ 4 ಪಂದ್ಯಗಳಿಂದ 33, ಕತಾರ್ ವಾರಿಯರ್ಸ್ ತಂಡದ ಕಬೀರ್ 5 ಪಂದ್ಯಗಳಿಂದ 32 ಹಾಗೂ ಲ್ಯಾನ್ಸರ್ ಲೀಫ್ಸ್ ತಂಡದ ಸಂದೀಪ್ 4 ಪಂದ್ಯಗಳಿಂದ 22 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.
0 comments:
Post a Comment