ಮನೆಯಲ್ಲೇ ನಮಾಜ್ ನಿರ್ವಹಿಸಿ, ಕಾನೂನು ಪಾಲನೆ ಮಾಡಿ : ಮುಸ್ಲಿಮರಿಗೆ ಎ.ಬಿ. ಇಬ್ರಾಹಿಂ ಮನವಿ - Karavali Times ಮನೆಯಲ್ಲೇ ನಮಾಜ್ ನಿರ್ವಹಿಸಿ, ಕಾನೂನು ಪಾಲನೆ ಮಾಡಿ : ಮುಸ್ಲಿಮರಿಗೆ ಎ.ಬಿ. ಇಬ್ರಾಹಿಂ ಮನವಿ - Karavali Times

728x90

29 March 2020

ಮನೆಯಲ್ಲೇ ನಮಾಜ್ ನಿರ್ವಹಿಸಿ, ಕಾನೂನು ಪಾಲನೆ ಮಾಡಿ : ಮುಸ್ಲಿಮರಿಗೆ ಎ.ಬಿ. ಇಬ್ರಾಹಿಂ ಮನವಿ



ಬೆಂಗಳೂರು (ಕರಾವಳಿ ಟೈಮ್ಸ್) : ಪ್ರತಿ ದಿನದ ಐದು ಹೊತ್ತಿನ ನಮಾಜನ್ನು ಮುಸ್ಲಿಮರು ಮನೆಯಲ್ಲಿಯೇ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಮಸೀದಿಗೆ ತೆರಳುವುದಾಗಲೀ ಅಥವಾ ನೆರೆಹೊರೆಯವರೊಂದಿಗೆ ಒಟ್ಟುಗೂಡಿ ಜಮಾಅತ್ ಸೇರುವುದಾಗಲೀ ಮಾಡಬಾರದು. ಹೀಗೆ ಮಾಡಿದಲ್ಲಿ ಇದು ಸರ್ಕಾರದ ಆದೇಶಗಳ ಉಲ್ಲಂಘನೆಯಾಗಿ ಕಾನೂನಿನಡಿ ಶಿಕ್ಷೆಗೆ ಒಳಗಾಗುವ ಸಂಭವವಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎ.ಬಿ. ಇಬ್ರಾಹೀಂ ಮನವಿ ಮಾಡಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕು ಹರಡದಂತೆ ಸಮಾಜದ ಹಾಗೂ ಈ ದೇಶದ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಅತ್ಯವಶ್ಯಕ ಕೆಲಸವಿದ್ದಲ್ಲಿ ಮಾತ್ರ ಮನೆಯಿಂದ ಹೊರಗೆ ಬರಬೇಕು. ಹೀಗೆ ಮನೆಯಿಂದ ಹೊರಗೆ ಬಂದರೂ ಸಹ ಅತ್ಯವಶ್ಯಕ ಕೆಲಸವನ್ನು ಪೂರೈಸಿಕೊಂಡು ತಕ್ಷಣ ಮನೆಗೆ ತೆರಳಬೇಕು ಎಂದು ಸೂಚಿಸಿದರು.

ವಿಶೇಷವಾಗಿ ಯುವಕರು ಅನವಶ್ಯಕವಾಗಿ ರಸ್ತೆಯಲ್ಲಿ ಓಡಾಡುವುದು, ಬೀದಿಗಳಲ್ಲಿ ಗುಂಪು ಸೇರುವುದು, ಬೈಕ್ ಓಡಿಸುವುದು ಮುಂತಾದವುಗಳಿಂದ ದೂರವಿರಬೇಕು. ಇಂಟರ್ನೆಟ್‍ನಲ್ಲಿ ಯೂಟ್ಯೂಬ್ ಮತ್ತು ವಾಟ್ಸಪ್‍ಗಳಲ್ಲಿ ಬರುವ ಅನವಶ್ಯಕ ವದಂತಿಗಳ ಕುರಿತು ಇರುವ ಫೆÇೀಟೋಗಳನ್ನು, ವೀಡಿಯೋಗಳನ್ನು ಹಂಚಿಕೊಳ್ಳಬಾರದು.  ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು. ಆದಷ್ಟು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಗುಂಪುಗೂಡಬಾರದು. ಒಟ್ಟಾರೆಯಾಗಿ ಸರ್ಕಾರದಿಂದ ಹಾಗೂ ಪೆÇಲೀಸ್ ಇಲಾಖೆಯಿಂದ ಕಾಲಕಾಲಕ್ಕೆ ನೀಡುವ ನಿರ್ದೇಶನಗಳನ್ನು ಹಾಗೂ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಎ ಬಿ ಇಬ್ರಾಹೀಂ ಮನವಿ ಮಾಡಿದರು.
  • Blogger Comments
  • Facebook Comments

0 comments:

Post a Comment

Item Reviewed: ಮನೆಯಲ್ಲೇ ನಮಾಜ್ ನಿರ್ವಹಿಸಿ, ಕಾನೂನು ಪಾಲನೆ ಮಾಡಿ : ಮುಸ್ಲಿಮರಿಗೆ ಎ.ಬಿ. ಇಬ್ರಾಹಿಂ ಮನವಿ Rating: 5 Reviewed By: karavali Times
Scroll to Top