ಮಂಗಳೂರು (ಕರಾವಳಿ ಟೈಮ್ಸ್) : ಮುಂಬೈ ನಿವಾಸಿ ಗೋಪಾಲಕೃಷ್ಣ ರೈ (45) ಹಾಗೂ ಅವರ ಪುತ್ರ ನಮೀಶ್ ರೈ (6) ಅವರು ಕೊಣಾಜೆ-ಪಾವೂರಿನಲ್ಲಿ ಸಂಬಂಧಿಕರ ಮನೆಗೆ ನೇಮಕ್ಕೆ ಬಂದವರು ಶನಿವಾರ ಮಧ್ಯರಾತ್ರಿ ಬಳಿಕ ತಮ್ಮ ಕಾರಿನಲ್ಲಿ ತೆರಳಿದ್ದು, ಭಾನುವಾರ ಬೆಳಿಗ್ಗೆ ಕಾರು ಉಳ್ಳಾಲ ಸೇತುವೆಯಲ್ಲಿ ಕಂಡು ಬಂದಿದೆ. ತಂದೆ-ಮಗ ನಾಪತ್ತೆಯಾಗಿದ್ದಾರೆ.
ಮೂಲತಃ ಬಂಟ್ವಾಳ ತಾಲೂಕಿನ ಬಾಳ್ತಿಲ ನಿವಾಸಿಯಾಗಿರುವ ಗೋಪಾಲಕೃಷ್ಣ ರೈ ಪ್ರಸ್ತುತ ಮುಂಬೈಯಲ್ಲಿ ನೆಲೆಸಿದ್ದು, ಕೊಣಾಜೆಯ ಪಾವೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ನಡೆಯುವ ನೇಮೋತ್ಸವಕ್ಕಾಗಿ ಎರಡು ದಿನಗಳ ಹಿಂದೆ ಪತ್ನಿ, ಮಗನ ಜೊತೆ ಆಗಮಿಸಿದ್ದರೆನ್ನಲಾಗಿದೆ. ಶನಿವಾರ ಬೆಳಗ್ಗಿನ ಜಾವ ಸುಮಾರು 2:30ರ ವೇಳೆಗೆ ಪುತ್ರನ ಜೊತೆ ಗೋಪಾಲಕೃಷ್ಣ ರೈ ಕಾರಿನಲ್ಲಿ ಮನೆಯಿಂದ ಹೊರಟಿದ್ದಾರೆ ಎನ್ನಲಾಗಿದೆ.
ಭಾನುವಾರ ಮುಂಜಾನೆ ಮಹಾರಾಷ್ಟ್ರ ನೋಂದಣಿಯ ಕಾರು ಉಳ್ಳಾಲ ಸೇತುವೆಯಲ್ಲಿ ಕಂಡು ಬಂದಿದ್ದು, ಸ್ಥಳೀಯರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ಗೋಪಾಲಕೃಷ್ಣ ಕಾರಿನಲ್ಲಿ ಡೆತ್ ನೋಟ್ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದ್ದು, ತಂದೆ-ಮಗ ನೇತ್ರಾವತಿಗೆ ಹಾರಿ ಆತ್ಮಹತ್ಯೆ ಮಾಡಿದ್ದಾರೋ ಅಥವಾ ಅಲ್ಲಿಂದ ಬೇರೆಡೆ ತೆರಳಿದ್ದಾರೋ ಎಂಬ ಬಗ್ಗೆ ಶಂಕೆ ಉಂಟಾಗಿದೆ. ಸ್ಥಳಕ್ಕೆ ಆಗಮಿಸಿರುವ ಮಂಗಳೂರು ಗ್ರಾಮಾಂತರ ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment