ಬಂಟ್ವಾಳ (ಕರಾವಳಿ ಟೈಮ್ಸ್) : ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮಿನಿ ಒಲಿಂಪಿಕ್ ಕ್ರೀಡಾಕೂಟಗದಲ್ಲಿ ಭಾಗವಹಿಸಿದ್ದ ತಾಲೂಕಿನ ಪಾಣೆಮಂಗಳೂರು ಫಿಟ್ನೆಸ್ ಮಲ್ಟಿ ಜಿಂ ಮತ್ತು ಮಾರ್ಶಲ್ ಆರ್ಟ್ಸ್ ಸಂಸ್ಥೆಯ ಟ್ವೆಕಾಂಡೋ ಕ್ರೀಡಾಪಟುಗಳಿಗೆ 1 ಬೆಳ್ಳಿ ಹಾಗೂ 3 ಕಂಚಿನ ಪದಕ ಗೆಲ್ಲುವ ಮೂಲಕ ಸಾಧನೆಗೈದಿದ್ದಾರೆ.
ಮುಝಮ್ಮಿರುಲ್ ಅಮೀನ್ 31 ಕೆ ಜಿ ವಿಭಾಗದಲ್ಲಿ ಬೆಳ್ಳಿ ಪದಕ, ಮುಹಮ್ಮದ್ ಹಿಶಾಂ 27 ಕೆ ಜಿ ವಿಭಾಗದಲ್ಲಿ, ಮುಹಮ್ಮದ್ ಶಾಕಿಬ್ 21 ಕೆ ಜಿ ವಿಭಾಗದಲ್ಲಿ ಹಾಗೂ ಮುಹಮ್ಮದ್ ಅಯಾನ್ 48 ಕೆ ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇವರಿಗೆ ದಕ್ಷಿಣ ಕನ್ನಡ ಜಿಲ್ಲಾ ಟ್ವೆಕಾಂಡೋ ತರಬೇತುದಾರ ಇಸಾಕ್ ನಂದಾವರ ತರಬೇತಿ ನೀಡಿದ್ದಾರೆ.
ಫೆ 7,8 ಹಾಗೂ 9 ರಂದು ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಒಲಿಂಪಿಕ್ ಸಂಸ್ಥೆ ಇವುಗಳ ಆಶ್ರಯದಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜಿಸಲಾಗಿತ್ತು.
0 comments:
Post a Comment