ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಬಡಗಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗಬೆಳ್ಳೂರು ಹಾಗೂ ತೆಂಕಬೆಳ್ಳೂರು ಗ್ರಾಮದಲ್ಲಿ ಸುಮಾರು 2 ಕೋಟಿ 10 ಲಕ್ಷ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಚಾಲನೆ ನೀಡಿದರು.
ತೆಂಕಬೆಳ್ಳೂರು ಗ್ರಾಮದ ಧನುಪೂಜೆಯಿಂದ ಕಾಗುಡ್ಡೆಯವರೆಗಿನ ಸುಮಾರು 1.50 ಕೋಟಿ ರೂಪಾಯಿ ರಸ್ತೆ ಅಭಿವೃದ್ದಿಗೆ ಶಿಲಾನ್ಯಾಸ ನೆರವೇರಿಸಿದ ಶಾಸಕರು ಉಳಿದ ಮೂರು ವರ್ಷಗಳ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರದ ಎಲ್ಲಾ ಗ್ರಾಮಗಳ ಅಭಿವೃಧ್ಧಿ ದೃಪ್ಠಿಯಲ್ಲಿ ಕೆಲಸ ಮಾಡುವ ಬಗ್ಗೆ ಹಾಗೂ ರಾಜ್ಯದಲ್ಲಿ ಬಂಟ್ವಾಳ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಪ್ರಯತ್ನಿಸುತ್ತೇನೆ ಎಂದರು.
ಬಡಗಬೆಳ್ಳೂರು ಗ್ರಾಮದಲ್ಲಿ 15 ಲಕ್ಷ ರೂಪಾಯಿ ವೆಚ್ಚದ ದೂಪೆಮಾರು ರಸ್ತೆ, 10 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ, 10 ಲಕ್ಷ ರೂಪಾಯಿ ವೆಚ್ಚದಲ್ಲಿ ಅಂಬೋಡಿ ಮಾರು ರಸ್ತೆ, 5 ಲಕ್ಷ ರೂಪಾಯಿ ವೆಚ್ಚದಲ್ಲಿ ಬಟ್ಟಾಜೆ ರಸ್ತೆ, 20 ಲಕ್ಷ ರೂಪಾಯಿ ವೆಚ್ಚದಲ್ಲಿ ತೆಂಕಬೆಳ್ಳೂರು ಗ್ರಾಮ ಕಮ್ಮಾಜೆ ರಸ್ತೆ, 10 ಲಕ್ಷ ರೂಪಾಯಿ ವೆಚ್ಚದಲ್ಲಿ ಬಡಗಬೆಳ್ಳೂರು ಗ್ರಾಮದ ಗುಡ್ಡೆಅಂಗಡಿ ಕೋಡಿಮಜಲು ರಸ್ತೆ, 5 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲಾಬಳಿ ಕೇಪುಲ್ದಡ್ಕ ರಸ್ತೆ, 10 ಲಕ್ಷ ರೂಪಾಯಿ ವೆಚ್ಚದಲ್ಲಿ ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆಯ 2 ರಸ್ತೆಗಳ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.
ಈ ಸಂದರ್ಭ ಕ್ಷೇತ್ರ ಬಿಜೆಪಿ ಉಪಾಧ್ಯಾಕ್ಷ ದೇವಪ್ಪ ಪೂಜಾರಿ, ತಾ ಪಂ ಸದಸ್ಯ ಯಶವಂತ ಪೊಳಲಿ, ಪ್ರಮುಖರಾದ ರಮೇಶ್ ಪೂಜಾರಿ ಬಟ್ಟಾಜೆ, ಪ್ರಕಾಶ್ ಆಳ್ವ, ಉಮೇಶ್ ಶೆಟ್ಟಿ ಪರಿಮೊಗರು, ನಂದರಾಮ ರೈ, ರತ್ನಾಕರ ಕೋಟ್ಯಾನ್, ತಿರುಲೇಶ್, ಪ್ರಕಾಶ್ ಬೆಳ್ಳೂರು, ಉಸ್ಮಾನ್ ಡಿ., ರಘವೀರ ಆಚಾರ್ಯ, ವಿಠಲ ಬೆಳ್ಳೂರು, ಸವಿತಾ ಶೆಟ್ಟಿ, ವೀಣಾ ಭಟ್, ಜಯರಾಮ್ ಶೆಟ್ಟಿ, ಪ್ರಮೋದ್ ಕಮ್ಮಾಜೆ, ಗಂಗಾಧರ್ ರೈ, ನಿರಂಜನ್ ಭಂಡಾರಿ, ಚಿದಾನಂದ ಬಟ್ಟಾಜೆ, ಮೋಹನದಾಸ್ ಕೊಟ್ಟಾರಿ, ಸಾಕೇತ್ ಶೆಟ್ಟಿ, ಹರೀಶ್ ಹೆಗ್ಡೆ, ಸಂತೋಷ್ ಪೂಂಜ, ಯೋಗೀಶ್, ಗಣೇಶ್, ರಮೇಶ್, ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment