ನಾವು ಕಾಗದ ಪತ್ರ ತೋರುವ ಪೌರರಲ್ಲ, ರಕ್ತದಿಂದ-ಹೃದಯದಿಂದ ಈ ದೇಶದ ಪೌರರು : ಜ್ಞಾನಪ್ರಕಾಶ ಸ್ವಾಮೀಜಿ - Karavali Times ನಾವು ಕಾಗದ ಪತ್ರ ತೋರುವ ಪೌರರಲ್ಲ, ರಕ್ತದಿಂದ-ಹೃದಯದಿಂದ ಈ ದೇಶದ ಪೌರರು : ಜ್ಞಾನಪ್ರಕಾಶ ಸ್ವಾಮೀಜಿ - Karavali Times

728x90

16 February 2020

ನಾವು ಕಾಗದ ಪತ್ರ ತೋರುವ ಪೌರರಲ್ಲ, ರಕ್ತದಿಂದ-ಹೃದಯದಿಂದ ಈ ದೇಶದ ಪೌರರು : ಜ್ಞಾನಪ್ರಕಾಶ ಸ್ವಾಮೀಜಿ



ಬಂಟ್ವಾಳ (ಕರಾವಳಿ ಟೈಮ್ಸ್) : ಭಾರತ ದೇಶವಾಗಿ ಉಳಿದಿದ್ದರೆ ಅದು ಸಂವಿಧಾನದ ಮೂಲಕ ಹೊರತು ಆರೆಸ್ಸೆಸ್ಸಿನಿಂದಲ್ಲ. ಆರೆಸ್ಸೆಸ್ಸಿಗರು ಭ್ರಮಾಲೋಕದಲ್ಲಿ ಇಂದಿಗೂ ತೇಲಾಡುತ್ತಿದ್ದಾರೆ. ಈ ದೇಶಕ್ಕಾಗಿ ಆರೆಸ್ಸೆಸ್ಸಿನ ಒಂದು ಮಗು ಕೂಡಾ ಏನನ್ನೂ ಮಾಡಿಲ್ಲ ಎಂಬುದು ಇಂದು ಇಡೀ ದೇಶಕ್ಕೆ ಗೊತ್ತಿದೆ. ಡಾ ಅಂಬೇಡ್ಕರ್ ಬರೆದ ಪವಿತ್ರವಾದ ಸಂವಿಧಾನ ಇಲ್ಲದೆ ಇದ್ದಿದ್ದರೆ ಇಂದು ಈ ಆರೆಸ್ಸೆಸ್ಸಿಗರು ಈ ದೇಶವನ್ನು ಹರಿದು ಮುಕ್ಕಿ ಹಾಕುತ್ತಿದ್ದರು ಎಂದು ಮೈಸೂರಿನ ಜ್ಞಾನಪ್ರಕಾಶ್ ಸ್ವಾಮೀಜಿ ತೀವ್ರ ವಾಗ್ದಾಳಿ ನಡೆಸಿದರು.
    ಸಾಲೆತ್ತೂರಿನಲ್ಲಿ ನಡೆದ ಎನ್ ಆರ್ ಸಿ ವಿರೋಧಿ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶದ ಸಂವಿಧಾನ-ಕಾನೂನಿಗೆ ಇಂದು ಅಪಾಯ ಬಂದಿದದೆ. ಅದಕ್ಕಾಗಿ ಇಡೀ ದೇಶದಲ್ಲಿ ಜನ ಬೀದಿಗೆ ಬಂದಿದ್ದಾರೆ. ದೇಶದ ಕಾನೂನನನ್ನು ಗೌರವಿಸುತ್ತಲೇ ಅದರ ಉಳಿವಿಗಾಗಿ ಅಹಿಂಸಾತ್ಮಕ ಚಳುವಳಿ ಆರಂಭವಾಗಿದೆ. ನಮ್ಮ ಹೋರಾಟಕ್ಕಾಗಿ ಈ ದೇಶದ ಕಾನೂನು ಪಾಲಕರು ಯಾವುದೇ ಕಾರಣಕ್ಕೂ ಹೆದರಿಕೊಳ್ಳಬೇಕಾಗಿಲ್ಲ. ನಮ್ಮ ಹೋರಾಟಗಾರರಲ್ಲಿ ಯಾರೂ ಕೂಡಾ ಹಿಂಸಾವಾದಿಗಳಿಲ್ಲ. ಎಲ್ಲರೂ ಅಹಿಂಸಾವಾದಿಗಳೇ ಇದ್ದಾರೆ ಎಂದರು.
    ನಾವೆಲ್ಲರೂ ರಕ್ತದಿಂದ, ಹೃದಯದಿಂದ ಭಾರತೀಯರಾಗಿದ್ದೇವೆ. ಕಾಗದ ಪತ್ರ ತೋರುವ ಭಾರತೀಯರಲ್ಲ. ಭಾರತದ ಸಂವಿಧಾನ, ಈ ದೇಶದ ಕಾನೂನು ಇಲ್ಲಿನ ಎಲ್ಲ ಪೌರರನ್ನು ಗೌರವಿಸಿ ಅಭಿಮಾನದ ಪೌರತ್ವ ನೀಡಿದೆ. ಇನ್ನು ಯಾರೋ ಏನೋ ಕೇಳಿದರು ಎಂದ ಮಾತ್ರಕ್ಕೆ ನಾವೇನೂ ಸಂಶಯಾಸ್ಪದರಾಗುವುದಿಲ್ಲ ಎಂದು ಗುಡುಗಿದರು.
  • Blogger Comments
  • Facebook Comments

0 comments:

Post a Comment

Item Reviewed: ನಾವು ಕಾಗದ ಪತ್ರ ತೋರುವ ಪೌರರಲ್ಲ, ರಕ್ತದಿಂದ-ಹೃದಯದಿಂದ ಈ ದೇಶದ ಪೌರರು : ಜ್ಞಾನಪ್ರಕಾಶ ಸ್ವಾಮೀಜಿ Rating: 5 Reviewed By: lk
Scroll to Top