ಸಮಸ್ಯೆ ಪರಿಹಾರ ಆಗದಿದ್ದರೆ ಸುಳ್ಯ ನಗರ ಪಂಚಾಯತ್ ಎದುರು ಧರಣಿ : ಎಎಪಿ ಎಚ್ಚರಿಕೆ - Karavali Times ಸಮಸ್ಯೆ ಪರಿಹಾರ ಆಗದಿದ್ದರೆ ಸುಳ್ಯ ನಗರ ಪಂಚಾಯತ್ ಎದುರು ಧರಣಿ : ಎಎಪಿ ಎಚ್ಚರಿಕೆ - Karavali Times

728x90

23 February 2020

ಸಮಸ್ಯೆ ಪರಿಹಾರ ಆಗದಿದ್ದರೆ ಸುಳ್ಯ ನಗರ ಪಂಚಾಯತ್ ಎದುರು ಧರಣಿ : ಎಎಪಿ ಎಚ್ಚರಿಕೆ



ಸುಳ್ಯ (ಕರಾವಳಿ ಟೈಮ್ಸ್) : ನಗರದ ಜ್ವಲಂತ ಸಮಸ್ಯೆಯಾಗಿರುವ ತ್ಯಾಜ್ಯ ವಿಲೇವಾರಿಯಾಗದೇ ನಗರ ಪಂಚಾಯತ್ ವಠಾರ ಮತ್ತು ಆಸುಪಾಸು ಗಬ್ಬು ನಾರುತ್ತಿದೆ. ಈ ಸಮಸ್ಯೆಯನ್ನು ಇನ್ನು 15 ದಿನಗಳೊಳಗೆ ಶಾಶ್ವತ ಪರಿಹಾರವಾಗದಿದ್ದರೆ ನಗರ ಪಂಚಾಯತ್ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಆಮ್ ಆದ್ಮಿ ಪಾರ್ಟಿ ಎಚ್ಚರಿಕೆ ನೀಡಿದೆ.


    ಸುಳ್ಯ ಪ್ರೆಸ್ ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎ.ಎ.ಪಿ. ಸಹಸಂಚಾಲಕ ರಶೀದ್ ಜಟ್ಟಿಪಳ್ಳ ಇನ್ನೂ ಎರಡು ಮೂರು ತಿಂಗಳಲ್ಲಿ ಮಳೆ ಬರಲಿದೆ. ಮಳೆ ಬಂದರೆ ನಗರ ಪಂಚಾಯತ್ ಎದುರು ಸಂಗ್ರಹಿಸಲಾಗಿರುವ ನಗರದ ಕಸ ಈಗಲೇ ದುರ್ವಾಸನೆ ಬೀರುತ್ತಿದ್ದು ಮಳೆ ಬಂದು ನೀರು ತಾಗಿದರೆ ಮತ್ತಷ್ಟು ಗಬ್ಬು ನಾರುತ್ತದೆ. ಆದ್ದರಿಂದ ಸುಳ್ಯದ ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಆಗಬೇಕು. ಇಲ್ಲಿಯ ಶಾಸಕರು ಜನಪ್ರತಿನಿಧಿಗಳು ಈ ಕುರಿತು ಕಾಳಜಿ ವಹಿಸಬೇಕು. ಇನ್ನು 15 ದಿನದಲ್ಲಿ ನಗರದ ಕಸ ವಿಲೇವಾರಿಗೆ ಪರಿಹಾರವಾಗದಿದ್ದರೆ ಸಾರ್ವಜನಿಕರನ್ನು ಸೇರಿಸಿ ಎ.ಎ.ಪಿ. ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.


    ಎ.ಎ.ಪಿ. ಕಾರ್ಯದರ್ಶಿ ದೀಕ್ಷಿತ್ ಕುಮಾರ್ ಜಯನಗರ ಮಾತನಾಡಿ ಆಶ್ರಯ ಯೋಜನೆಯಲ್ಲಿ ವಸತಿ ನೀಡುವ ಕುರಿತು ಪ್ರಕ್ರಿಯೆ ನಡೆಯಿತಾದರೂ ಇನ್ನೂ ಅರ್ಹರಿಗೆ ವಸತಿ ನೀಡಲು ಕ್ರಮಕೈಗೊಂಡಿಲ್ಲ. ವಿವಿಧ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿದವರಿಗೂ ಇನ್ನೂ ಅನುದಾನ ಬಿಡುಗಡೆಗೊಂಡಿಲ್ಲ. ಈ ಕುರಿತು ಶಾಸಕರು ಸರಕಾರದ ಗಮನಕ್ಕೆ ತಂದು ಅನುದಾನ ಬಿಡುಗಡೆ ಆಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

    ಗುರುಂಪು ನಾಗಪಟ್ಟಣ ರಸ್ತೆ ತೀರಾ ಹದಗೆಟ್ಟಿದ್ದು ಅದರ ದುರಸ್ಥಿ ಕಾರ್ಯವನ್ನು ನಗರ ಪಂಚಾಯತ್ ಶೀಘ್ರವಾಗಿ ಮಾಡಬೇಕು ಎಂದು ಎ.ಎ.ಪಿ. ಸಹಸಂಚಾಲಕ ರಾಮಕೃಷ್ಣ ಬೀರಮಂಗಲ ಇದೇ ವೇಳೆ ಆಗ್ರಹಿಸಿದರು. ಇನ್ನು ಎರಡು ತಿಂಗಳಲ್ಲಿ ನೀರಿನ ಅಭಾವ ಆಗುವ ಸಾಧ್ಯತೆ ಇದೆ. ಆದ್ದರಿಂದ ನೀರಿನ ಸಮಸ್ಯೆ ಉಂಟಾಗದಂತೆ ತಡೆಯಲು ಪಯಸ್ವಿನಿಗೆ ಕಿಂಡಿ ಅಣೆಕಟ್ಟು ನಿರ್ಮಿಸುವ ಕಾರ್ಯ ಆಗಬೇಕಾಗಿದೆ ಎಂದು ಡಿ.ಎಂ. ಶಾರೀಕ್ ಆಗ್ರಹಿಸಿದರು.











  • Blogger Comments
  • Facebook Comments

0 comments:

Post a Comment

Item Reviewed: ಸಮಸ್ಯೆ ಪರಿಹಾರ ಆಗದಿದ್ದರೆ ಸುಳ್ಯ ನಗರ ಪಂಚಾಯತ್ ಎದುರು ಧರಣಿ : ಎಎಪಿ ಎಚ್ಚರಿಕೆ Rating: 5 Reviewed By: lk
Scroll to Top