ಹಿಂದುಳಿದ ಸಮುದಾಯವನ್ನು ಒಗ್ಗೂಡಿಸಿ ದೇಶ ಕಟ್ಟಿದ ಕೀರ್ತಿ ಶಿವಾಜಿ ಮಹಾರಾಜರದ್ದು : ಶ್ರೀಧರ್ - Karavali Times ಹಿಂದುಳಿದ ಸಮುದಾಯವನ್ನು ಒಗ್ಗೂಡಿಸಿ ದೇಶ ಕಟ್ಟಿದ ಕೀರ್ತಿ ಶಿವಾಜಿ ಮಹಾರಾಜರದ್ದು : ಶ್ರೀಧರ್ - Karavali Times

728x90

19 February 2020

ಹಿಂದುಳಿದ ಸಮುದಾಯವನ್ನು ಒಗ್ಗೂಡಿಸಿ ದೇಶ ಕಟ್ಟಿದ ಕೀರ್ತಿ ಶಿವಾಜಿ ಮಹಾರಾಜರದ್ದು : ಶ್ರೀಧರ್





ಬಂಟ್ವಾಳ (ಕರಾವಳಿ ಟೈಮ್ಸ್) : ಹಿಂದುಳಿದ ಗಿರಿಜನರ ಸಮುದಾಯವನ್ನು ಒಗ್ಗೂಡಿಸಿ ರಾಜ್ಯ ಕಟ್ಟಿದ ಕೀರ್ತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ. ಅವರ ಜೀವನ ಗ್ರಂಥದಂತಿದ್ದು, ಛತ್ರಪತಿ ಶಿವಾಜಿಯ ಮಾತೃಪ್ರೇಮ, ದೇಶಪ್ರೇಮ ಪ್ರಸ್ತುತ ಸಮಾಜಕ್ಕೆ ಹೆಚ್ಚು ಆದರ್ಶವಾಗಿದೆ ಎಂದು ಬಂಟ್ವಾಳ ತಾಲೂಕು ಕಛೇರಿ ಶಿರಸ್ತೇದಾರ್ ಶ್ರೀಧರ್ ಹೇಳಿದರು.

    ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬುಧವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ  ಅವರು ಮುಖ್ಯ ಭಾಷಣಗೈದರು.

    ಕೇಂದ್ರ ಸ್ಥಾನಿಯ ಶಿರಸ್ತೇದಾರ್ ರಾಧಾಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. ಪಾಣೆಮಂಗಳೂರು ಹೋಬಳಿ ಉಪತಹಸೀಲ್ದಾರ್ ರೂಪೇಶ್, ಆಹಾರ ಶಿರಸ್ತೇದಾರ್ ಶ್ರೀನಿವಾಸ್, ಶಿರಸ್ತೇದಾರ್ ರಾಜೇಶ್ ನಾಯ್ಕ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಶುಕುಮಾರ್, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಮೊದಲಾದವರು ಭಾಗವಹಿಸಿದ್ದರು.

    ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಸ್ವಾಗತಿಸಿ, ವಂದಿಸಿದರು. ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತುಗಳು 







 
  • Blogger Comments
  • Facebook Comments

0 comments:

Post a Comment

Item Reviewed: ಹಿಂದುಳಿದ ಸಮುದಾಯವನ್ನು ಒಗ್ಗೂಡಿಸಿ ದೇಶ ಕಟ್ಟಿದ ಕೀರ್ತಿ ಶಿವಾಜಿ ಮಹಾರಾಜರದ್ದು : ಶ್ರೀಧರ್ Rating: 5 Reviewed By: lk
Scroll to Top