ಬಂಟ್ವಾಳ (ಕರಾವಳಿ ಟೈಮ್ಸ್) : ಶಾಲೆಯಲ್ಲಿ ಗೆಳೆಯರು ಹೊಡೆಯುತ್ತಾರೆ ಎಂಬ ನೆಪವೊಡ್ಡಿ ಎರಡು ದಿನಗಳ ಹಿಂದೆ ರಾಮನಗರದಿಂದ ತಪ್ಪಿಸಿಕೊಂಡು ಬಂದ ಬಾಲಕ ಬುಧವಾರ ಪಾಣೆಮಂಗಳೂರು ಸಮೀಪದ ಮೆಲ್ಕಾರಿಗೆ ಅಯ್ಯಪ್ಪ ವೃತಾಧಾರಿ ವ್ಯಕ್ತಿಯ ಜೊತೆ ಆಗಮಿಸಿದ ಸಂರ್ಭ ಮಾನವ ಹಕ್ಕುಗಳ ಸಂರಕ್ಷಣೆ ವೇದಿಕೆಯ ಜಿಲ್ಲಾಧ್ಯಕ್ಷ ಮುಹಮ್ಮದ್ ಇಕ್ಬಾಲ್ ಬಿ ಸಿ ರೋಡು ಅವರು ಬಾಲಕನನ್ನು ಪೊಲೀಸರ ಮುಖಾಂತರ ಪೋಷಕರಿಗೆ ಒಪ್ಪಿಸಿದ್ದಾರೆ.
ಮನೆಯಿಂದ ತಪ್ಪಿಸಿದ್ದ ಬಾಲಕ ರಾಮನಗರದಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದು, ಈ ಸಂದರ್ಭ ಕನಕಪುರ ನಿವಾಸಿ ಅಯ್ಯಪ್ಪ ಮಾಲಾಧಾರಿ ಸ್ವಾಮಿ ಸಿದ್ದರಾಮು ಅವರ ಜೊತೆ ಸೇರಿಕೊಂಡು ಅವರೊಂದಿಗೆ ಹೆಜ್ಜೆ ಹಾಕುತ್ತಾ ಬಂದು ಮೆಲ್ಕಾರ್ ತಲುಪಿದ್ದಾನೆ. ಅಯ್ಯಪ್ಪ ವೃತಾಧಾರಿ ಸಿದ್ದರಾಮು ಅವರು ಧರ್ಮಸ್ಥಳ ಕಡೆ ಹೊರಟಾಗಲೂ ತನ್ನ ಜೊತೆ ಬರಬೇಡ ಎಂದು ವಿನಂತಿಸಿದರೂ ಬಾಲಕ ಅವರನ್ನೇ ಹಿಂಬಾಲಿಸಿಕೊಂಡು ತೆರಳುತ್ತಿರುವುದು ಮೆಲ್ಕಾರಿನಲ್ಲಿದ್ದ ಪುರಸಭಾ ಪೌರ ಕಾರ್ಮಿಕರ ಗಮನಕ್ಕೆ ಬಂದಿದೆ. ಈ ಬಗ್ಗೆ ಪೌರಕಾರ್ಮಿಕರು ಮಾನವ ಹಕ್ಕುಗಳ ಸಂರಕ್ಷಣೆ ವೇದಿಕೆಯ ಜಿಲ್ಲಾಧ್ಯಕ್ಷ ಇಕ್ಬಾಲ್ ಪರ್ಲಿಯಾ ಅವರಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಇಕ್ಬಾಲ್ ಸ್ಥಳೀಯ ಸಂಘಟನೆ ಸದಸ್ಯರುಗಳ ಸಹಕಾರದಿಂದ ಬಾಲಕನನ್ನು ಪೊಲೀಸರ ವಶಕ್ಕೆ ಒಪ್ಪಿ ಪೋಷಕರನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದ್ದಾರೆ. ರಾತ್ರಿ ವೇಳೆಗೆ ಬಾಲಕನ ಪೋಷಕರನ್ನು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಕರೆಸಿ ಬಾಲಕನನ್ನು ಪೋಷಕರ ವಶಕ್ಕೆ ಒಪ್ಪಿಸಿ ಕಳುಹಿಸಿಕೊಡಲಾಗಿದೆ.
ಜಾಹೀರಾತುಗಳು
0 comments:
Post a Comment