ಮಂಗಳೂರು (ಕರಾವಳಿ ಟೈಮ್ಸ್) : ತಾಲೂಕಿನ ನೀರುಮಾರ್ಗದ ಪ್ರೆಸಿಡೆನ್ಸಿ ಸ್ಕೂಲ್‍ನಲ್ಲಿ ಶನಿವಾರ ನಡೆದ ಇಂಟರ್ ಸ್ಕೂಲ್ ಸ್ಕೇಟಿಂಗ್ ಸ್ಪರ್ಧೆಯ 14 ವರ್ಷಕ್ಕಿಂತ ಕೆಳಗಿನ ವಯೋಮಾನದ ವಿಭಾಗದಲ್ಲಿ ಬೆನೆಜರ್ ಹಾಗೂ 14 ರಿಂದ 16 ವರ್ಷ ವಯೋಮಾನದ ವಿಭಾಗದಲ್ಲಿ ಹಿಫಿಲ್‍ಮೆ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಇವರು ಪೊಳಲಿಯ ಶ್ರೀ ರಾಮಕೃಷ್ಣ ತಪೋವನದಲ್ಲಿ ರಾಷ್ಟ್ರೀಯ ಸ್ಕೇಟಿಂಗ್ ತರಬೇತುದಾರ ರಾಜೇಶ್ ಬ್ರಹ್ಮರಕೂಟ್ಲು ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
0 comments:
Post a Comment