ಹಾಜಿ ಜಿ. ಮುಹಮ್ಮದ್ ಹನೀಫ್ ಗೋಳ್ತಮಜಲು |
ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಸಂಯುಕ್ತ ಜಮಾತ್ ಇದರ ನೂತನ ಅಧ್ಯಕ್ಷರಾಗಿ ಹಾಜಿ ಜಿ. ಮುಹಮ್ಮದ್ ಹನೀಫ್ ಗೋಳ್ತಮಜಲು ಆಯ್ಕೆಯಾಗಿದ್ದಾರೆ.
ಸೋಮವಾರ ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆದ ಜಮಾಅತ್ ವಿಶೇಷ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಸಂಸ್ಥೆಯ ಉಪಾಧ್ಯಕ್ಷ ಎಂ. ಸ್. ಮುಹಮ್ಮದ್ ಸಭಾಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷರುಗಳಾಗಿ ಎಂ.ಎಸ್. ಮುಹಮ್ಮದ್, ಮುಹಮ್ಮದ್ ಶಫಿ ಸಜಿಪ, ಬಾವಾಕ ಫರಂಗಿಪೇಟೆ, ಬಿ.ಎಂ. ಅಬ್ಬಾಸ್ ಅಲಿ, ಪ್ರದಾನ ಕಾರ್ಯದರ್ಶಿಯಾಗಿ ಅಬೂಬಕರ್ ವಿಟ್ಲ, ಕಾರ್ಯದರ್ಶಿಗಳಾಗಿ ಖಲೀಲುಲ್ಲಾ ಬಂಟ್ವಾಳ, ಯೂಸುಫ್ ಕರಂದಾಡಿ, ಕೋಶಾಧಿಕಾರಿಯಾಗಿ ಹಾಜಿ ಪಿ.ಎಸ್. ಅಬ್ದುಲ್ ಹಮೀದ್, ಸಂಘಟನಾ ಕಾರ್ಯದರ್ಶಿಗಳಾಗಿ ಕೆ.ಎಸ್. ಮುಹಮ್ಮದ್ ಕಡೆಶಿವಾಲಯ, ಶೇಕ್ ರಹ್ಮತುಲ್ಲಾ, ಪತ್ರಿಕಾ ಕಾರ್ಯದರ್ಶಿಯಾಗಿ ಅಬ್ದುಲ್ ಲತೀಫ್ ನೇರಳಕಟ್ಟೆ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ರಶೀದ್ ವಿಟ್ಲ, ಸುಲೈಮಾನ್ ಹಾಜಿ ಕಲ್ಲಡ್ಕ, ಅಬ್ದುಲ್ ರಝಾಕ್ ಫಜೀರ್, ಸುಲೈಮಾನ್ ಹಾಜಿ ಸಿಂಗಾರಿ ನಾರ್ಶ, ರಫೀಕ್ ಹಾಜಿ ಸುರಿಬೈಲು, ಆಸಿಫ್ ಇಕ್ಬಾಲ್ ಫರಂಗಿಪೇಟೆ, ರಫೀಕ್ ಹಾಜಿ ಪಾಣೆಮಂಗಳೂರು, ಖಾದರ್ ಹಾಜಿ ಮುಡಿಪು, ಬಿ.ಎ. ಮುಹಮ್ಮದ್ ಬಂಟ್ವಾಳ, ಹಕೀಂ ಪರ್ತಿಪಾಡಿ, ಅಬ್ದುಲ್ ರಹಿಮಾನ್ ಹಾಜಿ ಕೇಪು, ಸುಲೈಮಾನ್ ಹಾಜಿ ಕಾಣಿಯೂರು, ಅಶ್ರಫ್ ಮೂಲರಪಟ್ಣ ಅವರನ್ನು ಆರಿಸಲಾಯಿತು.
0 comments:
Post a Comment