ಬಂಟ್ವಾಳ (ಕರಾವಳಿ ಟೈಮ್ಸ್) : ತಾಯಿ ನೆಲ ಮತ್ತು ತಾಯಿ ನುಡಿ ಪ್ರತಿಯೊಬ್ಬನಲ್ಲೂ ಹೃದಯಾಂತರಾಳದ ಪ್ರೇಮವನ್ನು ಹೊರಹೊಮ್ಮಿಸುತ್ತದೆ. ದೇಹಕ್ಕೆ ಹೃದಯದಂತೆ ಮಾತೃ ಭಾಷೆಯು ಶ್ರೇಷ್ಠವಾದುದು. ಕಾರಣ ಅದು ಹೃದಯದ ಭಾಷೆಯಾಗಿದೆ ಎಂದು ಬಂಟ್ವಾಳ ಎಸ್.ವಿ.ಎಸ್. ಕಾಲೇಜು ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಹೇಳಿದರು.
ಕಾಲೇಜಿನಲ್ಲಿ ನಡೆದ ಮಾತೃ ಭಾಷಾ ದಿವಸ್ ಆಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಾತೃ ಭಾಷೆ ಅದು ನಮ್ಮ ಸಂಸ್ಕøತಿಯ ಸಂಕೇತ. ಮಾತೃ ಭಾಷಾ ಬೆಳವಣಿಗೆಯಿಂದ ಸಂಸ್ಕøತಿ ಬೆಳೆಯಲು ಸಾಧ್ಯ. ನಮ್ಮ ಸಂಸ್ಕøತಿ ಪರಂಪರೆಗಳ ಅರಿವು ನಮಗಿರಬೇಕು. ಆದರೆ ಜಾಗತಿಕ ಯುಗವಾದ ಇಂದು ಇತರ ಭಾಷೆಗಳಿಂದ ನಮ್ಮ ತಾಯಿ ನುಡಿ ಮಾಯವಾಗುತ್ತಿದೆ ಎಂದವರು ವಿಷಾದಿಸಿದರು.
ಮಾತೃ ಭಾಷಾ ದಿವಸದ ಅಂಗವಾಗಿ ಮಾತೃ ಭಾಷೆಯ ಅಮೂಲ್ಯ ಗ್ರಂಥಗಳ ಪುಸ್ತಕ ಪ್ರದರ್ಶನ ನಡೆಯಿತು. ಗ್ರಂಥಪಾಲಕಿ ಗೀತಾ ಸ್ವಾಗತಿಸಿ, ಕನ್ನಡ ಉಪನ್ಯಾಸಕ ಕಿಟ್ಟು ರಾಮಕುಂಜ ವಂದಿಸಿದರು.
0 comments:
Post a Comment