ಬೆಂಗಳೂರು (ಕರಾವಳಿ ಟೈಮ್ಸ್) : ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಿಂದ ಶಿಕ್ಷಣ ಇಲಾಖೆ ಹಾಗೂ ಸರಕಾರ ಇನ್ನೂ ಪಾಠ ಕಲಿತಂತಿಲ್ಲ. ಕಳೆದ ಬಾರಿಯಂತೆ ಈ ಬಾರಿ ಯಾವುದೇ ಕಾರಣಕ್ಕೂ ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ನೋಡಿಕೊಳ್ಳವುದಾಗಿ ಶಿಕ್ಷಣ ಇಲಾಖೆ ಭರವಸೆ ನೀಡಿತ್ತು. ಆದರೆ ಇಲಾಖೆಯ ಹಾಗೂ ಸರಕಾರದ ಈ ಭರವಸೆ ಈ ಬಾರಿಯ ಪೂರ್ವ ಸಿದ್ದತಾ ಪರೀಕ್ಷೆಯಲ್ಲೇ ಹುಸಿಯಾಗಿದೆ. ಈ ಬಾರಿಯ ಪೂರ್ವ ಸಿದ್ದತಾ ಪರೀಕ್ಷೆಯ ಗಣಿತ ಹಾಗೂ ಇಂಗ್ಲಿಷ್ ಪ್ರಶ್ನೆ ಪತ್ರಿಕೆಗಳು ಸತತವಾಗಿ ಸೋರಿಕೆಯಾಗಿದ್ದು, ಮುಂಬರುವ ಪಬ್ಲಿಕ್ ಪರೀಕ್ಷೆ ಸಂದರ್ಭದಲ್ಲೂ ಇದು ಪುನರಾವರ್ತನೆ ಆಗುವುದಿಲ್ಲ ಎಂಬ ಗ್ಯಾರಂಟಿ ಏನಿದೆ ಎಂದು ವಿದ್ಯಾರ್ಥಿಗಳು ಹಾಗೂ ಪೆÇೀಷಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ರಾಜ್ಯಾದ್ಯಂತ ಸೋಮವಾರದಿಂದ ಆರಂಭಿಸಿದ ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ (ಪ್ರಿಪರೇಟರಿ) ಪರೀಕ್ಷೆಯ ಪ್ರಶ್ನೆಪತ್ರಿಕೆ ಮಂಗಳವಾರ ಹಾಗೂ ಬುಧವಾರ ಸತತವಾಗಿ ಸೋರಿಕೆಯಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದಾಗಿ ಸರ್ಕಾರ ಸತತ ಭರಸವೆ ನೀಡುತ್ತಾ ಬಂದಿದ್ದರೂ ಮಂಗಳವಾರ ಗಣಿತ ಹಾಗೂ ಬುಧವಾರ ದ್ವಿತೀಯ ಭಾಷೆ ಇಂಗ್ಲೀಷ್ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. ಪೂರ್ವ ಸಿದ್ಧತಾ ಪರಿಕ್ಷೆಯಲ್ಲಿಯೇ ಇಂತಹ ಸ್ಥಿತಿಯಾದರೆ ಮುಂಬರುವ ಅಂತಿಮ ಪಬ್ಲಿಕ್ ಪರೀಕ್ಷೆಯಲ್ಲಿ ಏನಾಗಬಹುದು ಎಂದು ವಿದ್ಯಾರ್ಥಿ ಪೋಷಕರು ಆತಂಕಿತರಾಗಿದ್ದಾರೆ.
ಬುಧವಾರ ಪರೀಕ್ಷೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಇಂಗ್ಲಿಷ್ ಭಾಷಾ ಪ್ರಶ್ನೆ ಪತ್ರಿಕೆಯು ಸಾಮಾಜಿಕ ಜಾಲತಾಣ ವಾಟ್ಸಪ್ ನಲ್ಲಿ ಹರಿದಾಡಿದೆ. ಈ ಬಗ್ಗೆ ಪರೀಕ್ಷಾ ಮಂಡಳಿ ಪೊಲೀಸ್ ದೂರು ನೀಡಿರುವುದು ಬಿಟ್ಟರೆ ಬೇರಾವುದೇ ಕಠಿಣ ಕ್ರಮಕ್ಕೆ ಮುಂದಾಗಿಲ್ಲ. ಸರಕಾರ ಶೈಕ್ಷಣಿಕ ವರ್ಷದ ಆರಂಭದಲ್ಲೇ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪಬ್ಲಿಕ್ ಪರೀಕ್ಷೆಗಳ ಬಗ್ಗೆ ಕಠಿಣ ಕ್ರಮದ ಕುರಿತು ಸತತ ಸೂಚನೆ ನೀಡುತ್ತಾ ಬಂದಿದೆಯಾದರೂ ಅದ್ಯಾವುದೂ ಪರಿಣಾಮ ಬೀರಿದಂತೆ ತೋರುತ್ತಿಲ್ಲ. ಈಗಾಗಲೇ ಪೂರ್ವ ಸಿದ್ದತಾ ಪರೀಕ್ಷೆಯಲ್ಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದರಿಂದ ಮುಂದಿನ ತಿಂಗಳು ನಡೆಯುವ ವಾರ್ಷಿಕ ಪಬ್ಲಿಕ್ ಪರೀಕ್ಷೆಯಲ್ಲಿ ಏನಾಗಬಹುದೋ ಎಂಬ ಗಂಭೀರ ಆತಂಕಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಒಳಗಾಗಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವ ಶಿಕ್ಷಕರನ್ನು ಅಂತಿಮ ಪರೀಕ್ಷೆ ಸಂದರ್ಭದಲ್ಲಿ ಪೆÇಲೀಸರ ವಶಕ್ಕೆ ನೀಡುವುದಾಗಿ ನಿನ್ನೆಯಷ್ಟೇ ಮಂಡಳಿ ಎಚ್ಚರಿಕೆ ನೀಡಿದ್ದರೂ ಕೂಡ ಬುಧವಾರ ಬಳ್ಳಾರಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಮಂಡಳಿ ಕಾರ್ಯವೈಖರಿ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೆÇೀಷಕರು ಪ್ರಶ್ನಿಸುವಂತಾಗಿದೆ.
ಜಾಹೀರಾತುಗಳು
0 comments:
Post a Comment