ಬಂಟ್ವಾಳ (ಕರಾವಳಿ ಟೈಮ್ಸ್) : ಎಸ್ಸೆಸ್ಸೆಫ್ ಫರಂಗಿಪೇಟೆ ಸೆಕ್ಟರ್ ವತಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಮಾಹಿತಿ ಶಿಬಿರ ಇತ್ತೀಚೆಗೆ ಪೇರಿಮಾರ್ ಸುನ್ನೀ ಸೆಂಟರಿನಲ್ಲಿ ನಡೆಯಿತು.
ಸೆಕ್ಟರ್ ಅಧ್ಯಕ್ಷ ಅಶ್ರಫ್ ಫಾಳಿಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಫರಂಗಿಪೇಟೆ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಲುಕ್ಮಾನ್ ಸಅದಿ ಉದ್ಘಾಟಿಸಿದರು. ನಾಸಿರ್ ಫಾಳಿಲಿ ಬಜಾಲ್ ತರಗತಿ ನಡೆಸಿಕೊಟ್ಟರು ಸೆಕ್ಟರ್ ಕೋಶಾಧಿಕಾರಿ ಫಾರೂಕ್ ಅಡ್ಯಾರ್ ಪದವು, ಜೊತೆ ಕಾರ್ಯದರ್ಶಿ ಅಮೀನ್ ತುಂಬೆ, ಸದಸ್ಯ ಅಮೀನ್ ಮಾಲಿಕ್ ಉಪಸ್ಥಿತರಿದ್ದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಉನೈಸ್ ಬಿ. ಸ್ವಾಗತಿಸಿ, ವಂದಿಸಿದರು.
0 comments:
Post a Comment