ಬಂಟ್ವಾಳ (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಆಲಡ್ಕ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಛೇರಿಯಲ್ಲಿ ಎಸ್ಕೆಎಸ್ಸೆಸ್ಸೆಫ್ ಸ್ಥಾಪಕ ದಿನಾಚರಣೆಯ ಅಂಗವಾಗಿ ಧ್ಜಜಾರೋಹಣ ಕಾರ್ಯಕ್ರಮ ಬುಧವಾರ ಬೆಳಿಗ್ಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೋ ಧ್ವಜಾರೋಹಣಗೈದರು. ಸಜಿಪನಡು ಜುಮಾ ಮಸೀದಿ ಖತೀಬ್ ಅಬೂಸ್ವಾಲಿಹ್ ಫೈಝಿ ಉದ್ಘಾಟಿಸಿದರು.
ಶಾಖಾ ಉಪಾಧ್ಯಕ್ಷ ಮಜೀದ್ ಬೋಳಂಗಡಿ, ಪ್ರಮುಖರಾದ ಇಸಾಕ್ ಫೇಶನ್ ವ್ಹೇರ್, ಬಶೀರ್ ಕೆ4, ಹನೀಫ್ ಯಮಾನಿ, ರಫೀಕ್ ಇನೋಳಿ, ಅಬ್ದುಲ್ ಜಬ್ಬಾರ್ ಬುರ್ಖಾ, ಝುಬೈರ್ ಯು., ಅಬ್ದುಲ್ ಮುತ್ತಲಿಬ್, ಹನೀಫ್ ಡ್ರೈಫಿಶ್, ತನ್ಸೀಫ್ ನಂದಾವರ, ಅಹಮದ್ ಆಲಡ್ಕ ಮೊದಲಾದವರು ಭಾಗವಹಿಸಿದ್ದರು. ಹಾಗೂ ಇತರರು ಉಪಸ್ಥಿತರಿದ್ದರು.
ಇದೇ ವೇಳೆ ಇತ್ತೀಚೆಗೆ ಪ್ರವಾದಿಗಳನ್ನು, ಇಸ್ಲಾಮನ್ನು ಹಾಗೂ ಮಸ್ಲಿಮರನ್ನು ಅವಹೇಳನ ಮಾಡಿ ಸಾಮಾಜಿಕ ಜಾಲತಾಣಗಳ ಹಂಚಿಕೊಂಡ ಮಧುಗಿರಿ ಮೋದಿಯ ಬಗ್ಗೆ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.
ಜಾಹೀರಾತುಗಳು
0 comments:
Post a Comment