ಬಷೀರ್ ಗಾಂಧಿ ನಗರ (ಅಧ್ಯಕ್ಷ) |
ಮನ್ಸೂರ್ ಪಡ್ಡ (ಪ್ರಧಾನ ಕಾರ್ಯದರ್ಶಿ) |
ನಾಸಿರ್ ಫ್ಯಾನ್ಸಿ (ಉಪಾಧ್ಯಕ್ಷ ) |
ರಿಝ್ವಾನ್ ಯು.ಕೆ. (ಸಂಘಟನಾ ಕಾರ್ಯದರ್ಶಿ) |
ಬೆಳ್ತಂಗಡಿ (ಕರಾವಳಿ ಟೈಮ್ಸ್) : ತಾಲೂಕಿನ ಪಡ್ಡಂದಡ್ಕ ಎಸ್ಕೆಎಸ್ಸೆಸ್ಸೆಫ್ ಶಾಖೆಯ ನೂತನ ಅಧ್ಯಕ್ಷರಾಗಿ ಬಶೀರ್ ಗಾಂಧಿನಗರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ಪಡ್ಡ ಅವರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಇಲ್ಲಿನ ಮುನವ್ವಿರುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ನಡೆದ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ. ಎಸ್.ಕೆ. ರಝಾಕ್ ಸಭಾಧ್ಯಕ್ಷತೆ ವಹಿಸಿದ್ದರು. ಮದ್ರಸ ಮುಖ್ಯ ಶಿಕ್ಷಕ ಝೈನುದ್ದೀನ್ ಅಮ್ಜದಿ ಉದ್ಘಾಟಿಸಿದರು. ಪಡ್ಡಂದಡ್ಕ ನೂರುಲ್ ಹುದಾ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಫಿ ಸ್ವಾಗತಿಸಿದರು. ಚುನಾವಣಾ ವೀಕ್ಷಕರಾಗಿ ವಲಯಾಧ್ಯಕ್ಷ ಅಝೀಝ್ ಮಾಲಿಕ್ ಹಾಗೂ ಪ್ರಧಾನ ಕಾರ್ಯದರ್ಶಿ ಫಾರೂಕ್ ವಿಶಾಲ್ ನಗರ ಭಾಗವಹಿಸಿದ್ದರು.
ಉಪಾಧ್ಯಕ್ಷರಾಗಿ ನಾಸಿರ್ ಫ್ಯಾನ್ಸಿ, ಕೋಶಾದಿಕಾರಿಯಾಗಿ ರಿಯಾಝ್ ಯು.ಕೆ., ಸಂಘಟನಾ ಕಾರ್ಯದರ್ಶಿಯಾಗಿ ರಿಝ್ವಾನ್ ಯು.ಕೆ., ವಿಖಾಯ ಕಾರ್ಯದರ್ಶಿಯಾಗಿ ಇರ್ಫಾನ್ ಪೆರಿಂಜೆ, ಟ್ರೆಂಡ್ ಕಾರ್ಯದರ್ಶಿಯಾಗಿ ಮಜೀದ್ ಪೆರಿಂಜೆ, ಇಬಾದ್ ಕಾರ್ಯದರ್ಶಿಯಾಗಿ ಜಿ.ಎಂ. ಕರೀಂ, ಸರ್ಗಾಲಯಮ್ ಕಾರ್ಯದರ್ಶಿಯಾಗಿ ಶಹದ್ ಪಡ್ಡಂದಡ್ಕ, ಸಹಚಾರಿ ಕಾರ್ಯದರ್ಶಿಯಾಗಿ ಅನ್ಸಾರ್ ಗಾಂಧಿನಗರ, ಕ್ಯಾಂಪಸ್ ವಿಂಗ್ ಕಾರ್ಯದರ್ಶಿಯಾಗಿ ಸಫ್ವಾನ್ ಕಟ್ಟೆ, ವರ್ಕಿಂಗ್ ಸಧಸ್ಯರಾಗಿ ಅಶ್ರಫ್ ಕುರ್ಲೊಟ್ಟು, ಉಬೈದ್ ಕಟ್ಟೆ, ಇಂತಿಯಾಝ್ ಕಟ್ಟೆ, ಮುಖ್ತಾರ್ ಕಿರೋಡಿ, ಮಹಮೂದ್ ಕಟ್ಟೆ, ಬಶೀರ್ ಕೆ.ಪಿ., ಕೌನ್ಸಿಲರ್ಸ್‍ಗಳಾಗಿ ರಝಾಕ್ ಎಸ್.ಕೆ., ಯು.ಕೆ. ಮುಹಮ್ಮದ್ ಹಾಜಿ, ಮುಹಮ್ಮದ್ ಶಾಫಿ ಕಿರೋಡಿ, ಬದ್ರುದ್ದೀನ್ ಪೆರಿಂಜೆ, ಝೈನುದ್ದೀನ್ ಪೆರಿಂಜೆ, ಹನೀಫ್ ಕಟ್ಟೆ, ರಫೀಕ್ ವಿ. ಕಟ್ಟೆ, ಇಕ್ಬಾಲ್ ಕುರ್ಲೊಟ್ಟು, ಫಾರೂಕ್ ಯಮಾನಿ ಕಿರೋಡಿ ಹಾಗೂ ಮಯ್ಯದ್ದಿ ಕಿರೋಡಿ ಅವರನ್ನು ಆರಿಸಲಾಯಿತು.
0 comments:
Post a Comment