ಯಕ್ಷಗುರು ಯೋಗೀಶ್ ಶರ್ಮಗೆ ‘ಯಕ್ಷ ಸಾಮ್ರಾಟ್’ ಪ್ರಶಸ್ತಿ
ಬಂಟ್ವಾಳ (ಕರಾವಳಿ ಟೈಮ್ಸ್) : ಶ್ರೀ ರಕ್ತೇಶ್ವರಿ ಯುವಕ ಸಂಘ ನೇರಂಬೋಳು ಇದರ 19ನೇ ವಾರ್ಷಿಕೋತ್ಸವ ಭಾನುವಾರ ನೇರಂಬೋಳು ಸಭಾ ಭವನದಲ್ಲಿ ನಡೆಯಿತು. ಪುರಸಭಾ ಸದಸ್ಯೆ ಮೀನಾಕ್ಷಿ ಜೆ. ಗೌಡ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ದಯಾನಂದ ಕುಲಾಲ್ ನೇರಂಬೋಳ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ. ರಮಾನಾಥ ರೈ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸಂಘದ ಗೌರವಾಧ್ಯಕ್ಷ ಚಂದ್ರಹಾಸ ಟೈಲರ್, ಕಾರ್ಯದರ್ಶಿ ಮಂಜುನಾಥ ಕುಲಾಲ್ ಭಾಗವಹಿಸಿದ್ದರು.
ಮನೋಹರ ಕುಲಾಲ್ ನೇರಂಬೋಳ್ ಸ್ವಾಗತಿಸಿ, ಪದ್ಮನಾಭ ಪ್ರಾರ್ಥನೆಗೈದರು. ರವೀಂದ್ರ ಕುಲಾಲ್ ವಂದಿಸಿದರು. ಯೋಗೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment