ಬಂಟ್ವಾಳ (ಕರಾವಳಿ ಟೈಮ್ಸ್) : ವಿಟ್ಲ ಸಮೀಪದ ಮಂಗಿಲಪದವು ನ್ಯಾಶನಲ್ ಯುವಕ ಮಂಡಲದ ಆಶ್ರಯದಲ್ಲಿ 60 ಕೆ.ಜಿ. ವಿಭಾಗದ ಹಾಗೂ ಸ್ಥಳೀಯ ಆಟಗಾರರನ್ನೊಳಗೊಂಡ 6 ತಂಡಗಳ ಲೀಗ್ ಕಬಡ್ಡಿ ಪಂದ್ಯಾಟ ಹಾಗೂ ವಿಟ್ಲ ಪೆÇಲೀಸ್ ಠಾಣಾಧಿಕಾರಿ ವಿನೋದ್ ಎಸ್ ಅವರಿಗೆ ಅಭಿನಂದÀನಾ ಸಮಾರಂಭ ಶುಕ್ರವಾರ ನಡೆಯಿತು.
ಪಂದ್ಯಾಟ ಉದ್ಘಾಟಿಸಿದ ವಿಟ್ಲ ಠಾಣಾಧಿಕಾರಿ ವಿನೋದ್ ಅವರು ಮಾತನಾಡಿ ಯುವಜನತೆ ಯಾವುದೇ ರೀತಿಯ ದುಶ್ಚಟ, ಸಮಾಜ ಬಾಹಿರ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೆ ಕ್ರೀಡೆಯಂತಹ ಉತ್ತಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.
ಯುವಕ ಮಂಡಲ ಗೌರವಾದ್ಯಕ್ಷ ಮಹಾಲಿಂಗ ಭಟ್ ಅಧ್ಯಕ್ಷತೆ ವಹಿಸಿದ್ದರು. ವೀರಕಂಭ ಗ್ರಾ.ಪಂ. ಅದ್ಯಕ್ಷೆ ಪ್ರೇಮಲತಾ, ಸದಸ್ಯ ಉಬೈದ್ ಕೆ., ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಎಸೋಸಿಯೇಶನ್ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ, ಸದಸ್ಯ ಕೆ.ಎಸ್. ಹಮೀದ್ ಕಂಬಳಬೆಟ್ಟು, ನ್ಯಾಯವಾದಿ ಆಲ್ವಿನ್ ಪ್ರಶಾಂತ್, ವಿಟ್ಲ ಠಾಣಾ ಸಿಬ್ಬಂದಿ ಸಂಜೀವ, ಯೂಸುಫ್ ಮಂಗಿಲಪದವು, ಸುಲೈಮಾನ್ ಒಕ್ಕೆತ್ತೂರು, ಹಿರಿಯ ಕಬಡ್ಡಿ ಆಟಗಾರರಾದ ಮಜೀದ್ ಮಾಣಿ, ಪದ್ಮನಾಭ ಕನಪಾದೆ ಹಾಗೂ ಇಕ್ಬಾಲ್ ಕೊಡಂಗೆ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪಂದ್ಯಾಟದ ಸಂಚಾಲಕ ಮುಹಮ್ಮದ್ ಸ್ವಾಲಿಹ್ ಸ್ವಾಗತಿಸಿ, ಯುವಕ ಮಂಡಲ ಉಪಾಧ್ಯಕ್ಷ ರಘುನಾಥ್ ಕೆಲಿಂಜ ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
ಜಾಹೀರಾತುಗಳು
0 comments:
Post a Comment