ಬಂಟ್ವಾಳ (ಕರಾವಳಿ ಟೈಮ್ಸ್) : ಎಸ್ಸೆಸ್ಸೆಫ್ ಮಂಚಿ ಸೆಕ್ಟರ್ ಮಹಾಸಭೆ ಇಲ್ಲಿನ ಕೈಯೂರು ಸುನ್ನೀ ಮಹಲಿನಲ್ಲಿ ನಡೆಯಿತು. ಸೆಕ್ಟರ್ ಅಧ್ಯಕ್ಷ ಅಸ್ಲಂ ಸಂಪಿಲ ಸಭಾಧ್ಯಕ್ಷತೆ ವಹಿಸಿದ್ದರು. ಸುನ್ನೀ ಮಹಲ್ ಸಾರಥಿ ಎಣ್ಮೂರು ಉಸ್ತಾದ್ ಉದ್ಘಾಟಿಸಿದರು. ಸೆಕ್ಟರ್ ವೀಕ್ಷಕರಾಗಿ ಭಾಗವಹಿಸಿದ್ದ ಬಂಟ್ವಾಳ ಡಿವಿಷನ್ ಅಧ್ಯಕ್ಷ ಅಕ್ಬರಲಿ ಮದನಿ ಸಂಘಟನಾ ತರಗತಿ ನಡೆಸಿಕೊಟ್ಟರು.
ಇದೇ ವೇಳೆ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಝುಬೈರ್ ಸಂಪಿಲ, ಪ್ರಧಾನ ಕಾರ್ಯದರ್ಶಿಯಾಗಿ ನೌಫಲ್ ಕಟ್ಟತ್ತಿಲ, ಕೋಶಾಧಿಕಾರಿಯಾಗಿ ಜಾಬಿರ್ ಪಡ್ಪು, ಕ್ಯಾಂಪಸ್ ಕಾರ್ಯದರ್ಶಿಯಾಗಿ ಅರ್ಫಾಝ್ ಕೈಯ್ಯೂರು, ಉಪಾಧ್ಯಕ್ಷರಾಗಿ ಹಂಝ ಮಂಚಿ, ಸಿದ್ದೀಕ್ ನೂಜಿ, ಕಾರ್ಯದರ್ಶಿಗಳಾಗಿ ಫರ್ವಾಝ್ ಮಂಚಿ, ಲುಕ್ಮಾನ್ ಕುಕ್ಕಾಜೆ ಅವರನ್ನು ಆರಿಸಲಾಯಿತು.
ಸಭೆಯಲ್ಲಿ ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಬ್ಲಡ್ ಸೈಬೋ ಸಂಚಾಲಕ ಕರೀಂ ಕದ್ಕಾರ್, ಎಸ್ಸೆಸ್ಸೆಫ್ ಜಿಲ್ಲಾ ವೆಸ್ಟ್ ಝೋನ್ ಕೋಶಾಧಿಕಾರಿ ಆಬಿದ್ ನಈಮಿ, ಬಂಟ್ವಾಳ ಡಿವಿಷನ್ ಕೋಶಾಧಿಕಾರಿ ಅಲಿ ಮದನಿ, ಡಿವಿಷನ್ ನಾಯಕ ಅಲ್ತಾಫ್ ಕೊಳಕೆ, ಸೆಕ್ಟರ್ ಉಸ್ತುವಾರಿ ಅನ್ಸಾರ್ ಕಾರಾಜೆ, ಎಸ್.ವೈ.ಎಸ್. ನಾಯಕ ರಫೀಕ್ ಝುಹ್ರಿ ಮಂಚಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಲುಕ್ಮಾನ್ ಕುಕ್ಕಾಜೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ನೌಫಲ್ ಕಟ್ಟತ್ತಿಲ ವಂದಿಸಿದರು.
0 comments:
Post a Comment