ಬಂಟ್ವಾಳ (ಕರಾವಳಿ ಟೈಮ್ಸ್) : ಪುತ್ತೂರಿನ ಆರೆಸ್ಸೆಸ್ ಮುಖಂಡರ ಕಾಲೇಜಿನ ಹೊರಗಡೆ ಧರ್ಮದ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಅವರ ಹೆತ್ತವರಿಗೆ ಥಳಿಸಲಾಗುತ್ತದೆ. ಆದರೆ ಇಲ್ಲಿನ ಕಾನೂನು ಮೌನವಾಗುತ್ತದೆ. ಬೀದರ್ ಶಾಲೆಯಲ್ಲಿ ನಾಟಕ ಮಾಡಿದ ಮಕ್ಕಳ ಹೆತ್ತವರಿಗೆ, ಶಿಕ್ಷಕರ ಮೇಲೆ ಕೇಸು ಜಡಿಯಲಾಗುತ್ತದೆ. ಆದರೆ ಬೇಕಾಬಿಟ್ಟಿಯಾಗಿ ದ್ವೇಷ ಭಾಷಣ ಮಾಡುವ ಕಲ್ಲಡ್ಕ ಪ್ರಭಾಕರ್ ಭಟ್ಟರ ವಿರುದ್ದ ಇಲ್ಲಿನ ಕಾನೂನು ಪಾಲಕರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಏಕೆ ಎಂದು ಚಿಂತಕ ಮಹೇಂದ್ರ ಕುಮಾರ್ ಪ್ರಶ್ನಿಸಿದರು.
ಸಾಲೆತ್ತೂರಿನಲ್ಲಿ ನಡೆದ ಎನ್ ಆರ್ ಸಿ ವಿರೋಧಿ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ಆರೆಸ್ಸೆಸ್ ಪ್ರೇರಿತರಿಂದ ಇಲ್ಲಿ ನಡೆಯುವ ಕಾನೂನು ಮೀರಿದ ವರ್ತನೆಗಳ ವಿರುದ್ದ ಬೀದಿಗಿಳಿದು ಹೋರಾಟ ಮಾಡಿ ಜನ ಚಳುವಳಿ ರೂಪಿಸಲು ನಮಗೇನು ಗೊತ್ತಿಲ್ಲದೆ ಕೈ ಕಟ್ಟಿ ಕುಳಿತಿಲ್ಲ. ಬದಲಾಗಿ ಈ ನೆಲದ ಸೌಹಾರ್ದ ಪರಂಪೆಗೆ ಗೌರವ ಕೊಟ್ಟು ತಾಳ್ಮೆ ವಹಿಸಿಕೊಳ್ಳುತ್ತಿದ್ದೇವಷ್ಟೆ. ಇದನ್ನು ಆಳುವವರು ಹಾಗೂ ಪೊಲೀಸರು ಅರ್ಥ ಮಾಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಕಳೆದ ಲೋಕಸಭಾ ಚುನಾವಣಾಪೂರ್ವದಲ್ಲಿ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿ ಇಂದಿಗೂ ಸಂಶಯಾಸ್ಪದವಾಗಿದೆ. ಈ ಬಗ್ಗೆ ಇದುವರೆಗೂ ಯಾವುದೇ ತನಿಖೆಗಳೂ ನಡೆದಿಲ್ಲ. ಗರಿಷ್ಠ ಭದ್ರತೆಯ ನಡುವೆಯೂ ಒಬ್ಬ ಭಯೋತ್ಪಾದಕ ಅದೇಗೆ ನುಸುಳಿ ಬಂದು ದಾಳಿ ನಡೆಸಿ ನಮ್ಮ ಸೈನಿಕರ ಮಾರಣ ನಡೆಸುತ್ತಾನೆ ಎಂಬುದೇ ಪ್ರಶ್ನಾರ್ಥಕವಾಗಿದೆ ಎಂದು ಮಹೇಂದ್ರ ಕುಮಾರ್ ಛೇಡಿಸಿದರು.
0 comments:
Post a Comment