ಡಾ. ಸುಷ್ಮಾ ಸಿ. ಪೂಜಾರಿ |
ಮುಂಬಯಿ (ಕರಾವಳಿ ಟೈಮ್ಸ್) : ಸರಕಾರಿ ಮೆಡಿಕಲ್ ಕಾಲೇಜು ಬೈಕುಲಾ ಇದರ ಪ್ರತಿಭಾನ್ವಿತ ವಿದ್ಯಾಥಿರ್üನಿ ಮುಂಬಯಿ ಜೆ.ಜೆ. ಆಸ್ಪತ್ರೆಯ ಮೆಡಿಕಲ್ ಕಾಲೇಜ್‍ನಲ್ಲಿ ವೈದ್ಯಕೀಯ ಶಿಕ್ಷಣ ಪಡೆದ ಬಂಟ್ವಾಳ ಮೂಲದ ಡಾ. ಸುಷ್ಮಾ ಸಿ. ಪೂಜಾರಿ ಅವರು ಎಂಬಿಬಿಎಸ್ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.
ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ನೆಲೆಕುಮೇರಿ ಕುಕ್ಕಿಪಾಡಿ ಗ್ರಾಮದ ನಿವಾಸಿ, ಪ್ರಸ್ತುತ ಮುಂಬಯಿ ಉಪನಗರದ ಭಿವಂಡಿಯಲ್ಲಿ ಟೈಲರ್ ವೃತ್ತಿ ನಡೆಸುತ್ತಿರುವ ಚಂದ್ರಶೇಖರ ಪೂಜಾರಿ ಮತ್ತು ಕಾರ್ಕಳ ತಾಲೂಕು ಮುದ್ರಾಡಿ ಲಕ್ಷ್ಮೀ ಸಿ. ಪೂಜಾರಿ ದಂಪತಿಯ ಪುತ್ರಿಯಾಗಿದ್ದಾರೆ.
ಜಾಹೀರಾತುಗಳು
0 comments:
Post a Comment