3 ಗಂಟೆ 40 ನಿಮಿಷದಲ್ಲಿ ಮಂಗಳೂರಿ£ಂದ ಬೆಂಗಳೂರಿಗೆ ಯು.ಟಿ. ಖಾದರ್ ಅವರನ್ನು ತಲುಪಿಸಿದ ಲಿಬ್ಝತ್ ದಾಖಲೆ..
ಮಂಗಳೂರು (ಕರಾವಳಿ ಟೈಮ್ಸ್) : ಅಂದು ಮಾರ್ಚ್ 26, 2014. ಬಿ. ಜನಾರ್ದನ ಪೂಜಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ದಿನ. ಜಿಲ್ಲಾಧಿಕಾರಿ ಕಛೇರಿಯಲ್ಲಿ ಬೆಳಿಗ್ಗೆ 11.30ಕ್ಕೆ ನಾಮಪತ್ರ ಸಲ್ಲಿಕೆ. ಆಗ ಮಂಗಳೂರು ಶಾಸಕರಾಗಿದ್ದ ಯು.ಟಿ.ಖಾದರ್, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು. ಮಹಮ್ಮದ್ ಲಿಬ್ಝತ್ ಸಚಿವರ ಆಪ್ತ ಸಹಾಯಕರು.
ಯು.ಟಿ.ಖಾದರ್ ಅವರಿಗೆ ಅಂದು ಸಂಜೆ 4 ಗಂಟೆಗೆ ಬೆಂಗಳೂರು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತುರ್ತು ಕ್ಯಾಬಿನೆಟ್ ಸಭೆ ಕರೆದಿದ್ದರು. ಇತ್ತ ಪೂಜಾರಿಯವರ ನಾಮಪತ್ರ ಸಲ್ಲಿಕೆಯಲ್ಲೂ ಭಾಗವಹಿಸಬೇಕಿತ್ತು. ಈ ಮಧ್ಯೆ ಮಂಗಳೂರಿ£ಂದ ಬೆಂಗಳೂರಿಗೆ ವಿಮಾನವೂ ಇಲ್ಲ. ಮಿ£ಸ್ಟರ್ ಸರಕಾರಿ ಇನ್ನೋವಾದಲ್ಲಿ ಹೋದರೆ ಕ್ಯಾಬಿನೆಟ್ ಗೆ ತಲುಪುವುದು ಕಷ್ಟ. ಈ ಸಂಧಿಗ್ದ ಪರಿಸ್ಥಿತಿಯಲ್ಲಿ ಗುರಿ ಮುಟ್ಟಿಸಿದವರೇ ಪಿಎ ಲಿಬ್ಝತ್.
ಮಂಗಳೂರು ಜಿಲ್ಲಾಧಿಕಾರಿ ಕಛೇರಿಯಿಂದ ನಾಮಪತ್ರ ಸಲ್ಲಿಸಿದ ಬಳಿಕ ಮಧ್ಯಾಹ್ನ 12:00 ಗಂಟೆಗೆ ಹೊರಟ ಖಾಸಗಿ ಆಡಿ ಕಾರಲ್ಲಿ ಲಿಬ್ಝತ್ ಡ್ರೈವಿಂಗ್ ಸೀಟ್‍ನಲ್ಲಿ ಕೂತರೆ, ಯು.ಟಿ. ಖಾದರ್ ಕಾರು ಹತ್ತಿದರು. ಖಾಸಗಿ ಅಂದ್ರೆ ಹೇಳಬೇಕೇ, ಟ್ರಾಫಿಕ್ ನಡುವೆ ಹೋಗಬೇಕು. ಮಂಗಳೂರಿ£ಂದ ಬೆಂಗಳೂರು ತನಕ ಸಿಗುವ ಆರೇಳು ಟೋಲ್ ಬೂತ್’ಗಳಲ್ಲಿ ಕ್ಯೂ £ಲ್ಲಬೇಕು. ನೆಲಮಂಗಲ ನಂತರದ ಟ್ರಾಫಿಕ್ ಕಿರಿಕಿರಿ ಮಧ್ಯೆ ಮುನ್ನುಗ್ಗಬೇಕು. ಈ ಮಧ್ಯೆ ಆಗಾಗ ಸಚಿವರಿಗೆ ಬರುತ್ತಿದ್ದ ಫೆÇೀನನ್ನು ಲಿಬ್ಝತ್ ಅಟೆಂಡ್ ಮಾಡಿ ಕೊಡಬೇಕು. ಇವನ್ನೆಲ್ಲಾ ದಾಟಿ ರಿಸ್ಕ್ ತೆಗೆದುಕೊಂಡು 3.40ಕ್ಕೆ ಬೆಂಗಳೂರಿನ ಜಯಮಹಲ್ ತಲುಪಿಸಿದ ಲಿಬ್ಝತ್ ಕೆಚ್ಛೆದೆಯ ಅತೀ ಸ್ಪೀಡ್ ಚಾಲನೆಗೆ 2014ರಲ್ಲೇ ದಾಖಲೆ ಬರೆದಿದ್ದು ಇಂದೂ ನೆನಪಾಗುತ್ತಿದೆ.
ಕೇವಲ 3 ಗಂಟೆ 40 £ಮಿಷದಲ್ಲಿ ಗುರಿ ಮುಟ್ಟಿಸಿದರು. 03:40ಕ್ಕೆ ಜಯಮಹಲ್ ನಲ್ಲಿ ಊಟ ಮಾಡಿ 03:55ಕ್ಕೆ ಸಿದ್ಧರಾಮಯ್ಯ ಅವರ ಕಾರು ವಿಧಾನಸೌಧ ಎಂಟ್ರಿಯಾಗುವಾಗ ಯು.ಟಿ. ಖಾದರ್ ಅವರ ‘ಆಡಿ’ ಕಾರು ಅದರ ಹಿಂಬದಿಯಲ್ಲಿತ್ತು.
ಇಂತಹುದೇ ಘಟನೆ ಮತ್ತೊಮ್ಮೆ ನಡೆದಿತ್ತು. ಧರ್ಮಸ್ಥಳದಲ್ಲಿ ಕಾರ್ಯಕ್ರಮ. ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಸ್ಥಳದಿಂದ ಮಂಗಳೂರು ಸರ್ಕ್ಯೂಟ್ ಹೌಸ್‍ಗೆ ಹೆಲಿಕಾಪ್ಟರ್ ನಲ್ಲಿ ಹೊರಟಿದ್ದರು. ಸಿದ್ದರಾಮಯ್ಯ ಹೆಲಿಕಾಪ್ಟರ್ ಹತ್ತಿ ಅದರ ಫ್ಯಾನ್ ತಿರುಗುವವರೆಗೂ ಯು.ಟಿ. ಖಾದರ್ ಧರ್ಮಸ್ಥಳದ ಹೆಲಿಪ್ಯಾಡಿನಲ್ಲೇ ಇದ್ದರು. ಸಿದ್ದರಾಮಯ್ಯ ಮಂಗಳೂರು ತಲುಪುವಾಗ ಸಚಿವ ಯು.ಟಿ.ಖಾದರ್ ಮಾರ್ಗ ಮೂಲಕ ಮಂಗಳೂರಿಗೆ ಹೋಗುವ ಅ£ವಾರ್ಯ ಪರಿಸ್ಥಿತಿ. ಆಗಲೂ ಡ್ರೈವರ್ ಸೀಟಲ್ಲಿ ಕೂತವರು ಅವರ ಪಿಎ ಮಹಮ್ಮದ್ ಲಿಬ್ಝತ್.
ಧರ್ಮಸ್ಥಳದಿಂದ ಮಂಗಳೂರಿನ ಅಗಲ ಕಿರಿದಾದ ತಿರುವು-ಮುರುವು ರಸ್ತೆ ಗೊತ್ತೇ ಇದೆ. ಜೊತೆಗೆ ವಿಪರೀತ ವಾಹನ ಟ್ರಾಫಿಕ್ ಬೇರೆ. ಇದನ್ನೆಲ್ಲಾ ದಾಟಬೇಕು. ಬೆಳ್ತಂಗಡಿ ಮತ್ತು ವಗ್ಗದಲ್ಲಿ ತಲಾ ಐದೈದು £ಮಿಷ ಸಚಿವ ಯು.ಟಿ.ಖಾದರ್ ಅಭಿಮಾ£ಗಳಿಗೋಸ್ಕರ £ಲ್ಲಿಸಿದ್ದರು. ವಗ್ಗ ತಲುಪುವಾಗ ಹೆಲಿಕಾಪ್ಟರ್ ನೇರ ಮೇಲಿಂದ ಹಾರುವುದು ಕಾಣಿಸುತ್ತಿತ್ತು. ಕಾರಲ್ಲಿ ಡೀಸೆಲ್ ಮುಗಿದ ಕಾರಣ ಅಡ್ಯಾರ್ ಪಂಪ್‍ನಲ್ಲೂ ಐದು ನಿಮಿಷ ನಿಲ್ಲಬೇಕಾಯಿತು.
ಇವೆಲ್ಲವನ್ನೂ ದಾಟಿ ಸಿದ್ದರಾಮಯ್ಯ ಅವರು ಸರ್ಕ್ಯೂಟ್ ಹೌಸಿನ ಮೆಟ್ಟಿಲು ಹತ್ತುವ ಮುನ್ನ ಯು.ಟಿ. ಖಾದರ್ ಸ್ವಾಗತಿಸಲು ಅಲ್ಲಿದ್ದರು. ಅಂದು ಖಾದರನ್ನು ನೋಡಿ ಖುದ್ದು ಸಿದ್ದರಾಮಯ್ಯನವರಿಗೆ ಆಶ್ಚರ್ಯವಾಗಿತ್ತು.
0 comments:
Post a Comment