ಮಂಗಳೂರು (ಕರಾವಳಿ ಟೈಮ್ಸ್) : ಕಂಬಳ ಕ್ರೀಡೆಯಲ್ಲಿ ಕೋಣದೊಂದಿಗೆ ಓಟದಲ್ಲಿ ಉಸೇನ್ ಬೋಲ್ಟ್ ದಾಖಲೆ ಮುರಿದು ದಿನ ಬೆಳಗಾಗುವುದರಲ್ಲಿ ದೇಶಾದ್ಯಂತ ಮಿಂಚಿನ ಸಂಚಾರ ಮೂಡಿಸಿದ್ದ ಕರಾವಳಿಯ ಕಂಬಳ ಕೋಣಗಳ ಓಟಗಾರ ಶ್ರೀನಿವಾಸ್ ಗೌಡ ತಮ್ಮ ಸಾಧನೆಯನ್ನು ಭಾನುವಾರವೂ ಮುಂದುರಿಸಿದ್ದಾರೆ.
ವೇಣೂರಿನ ಪೆರ್ಮುದೆಯಲ್ಲಿ ಭಾನುವಾರ ನಡೆದ ಸೂರ್ಯ-ಚಂದ್ರ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ ಗೌಡ ಮತ್ತೆ ಮೂರು ಚಿನ್ನದ ಪದಕಗಳನ್ನು ಕೊರಳಿಗೆ ಹಾಕಿಕೊಂಡು ಮಿಂಚಿದ್ದಾರೆ. ಹಗ್ಗ ಹಿರಿಯ, ನೇಗಿಲು ಹಿರಿಯ ಹಾಗೂ ನೇಗಿಲು ಕಿರಿಯ ವಿಭಾಗದಲ್ಲಿ ಶ್ರೀನಿವಾಸ ಗೌಡ ಚಿನ್ನದ ಪದಕ ಗೆದ್ದುಕೊಂಡು ಮತ್ತೆ ಸುದ್ದಿಯಾಗಿದ್ದಾರೆ.
ಶ್ರೀನಿವಾಸ ಗೌಡ ಅವರನ್ನು ಕಣ್ಣಾರೆ ಕಂಡು ಮಾತನಾಡಿಸಲು ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ದೌಡಾಯಿಸಿದ್ದು, ಸೆಲ್ಫಿ ತೆಗೆದು ಸಂಭ್ರಮಿಸಿದ್ದಾರೆ.
0 comments:
Post a Comment