ಬಂಟ್ವಾಳ (ಕರಾವಳಿ ಟೈಮ್ಸ್) : ಪುತ್ತೂರು ತಾಲೂಕಿನ ನಂದನ ಬಿತ್ತ್‍ಲ್ ಶ್ರೀ ಕ್ಷೇತ್ರ ಗೆಜ್ಜೆಗಿರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಸಾಗಿ ಬಂದ ಭಕ್ತರಿಗೆ ಬಿ.ಸಿ.ರೋಡು ಸಮೀಪದ ಕೈಕಂಬ ಜಂಕ್ಷನ್ನಿನಲ್ಲಿ ಮಡಿಕೇರಿ ಶರೀಫ್ ಇವರ ನೇತೃತ್ವದಲ್ಲಿ ಮುಸ್ಲಿಂ ಬಾಂಧವರಿಂದ ಸೋಮವಾರ ತಂಪು ಪಾನೀಯ ವಿತರಿಸಲಾಯಿತು.
ಈ ಸಂದರ್ಭ ಬಂಟ್ವಾಳ ತಾ.ಪಂ. ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪುರಸಭಾ ಸದಸ್ಯರಾದ ಮುಹಮ್ಮದ್ ನಂದರಬೆಟ್ಟು, ಲುಕ್ಮಾನ್ ಬಿ.ಸಿ.ರೋಡು, ಮಾನವ ಹಕ್ಕು ಸಂರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಇಕ್ಬಾಲ್, ಪ್ರಮುಖರಾದ ಸಮದ್ ಕೈಕಂಬ, ಆದಂ ಅದ್ದೇಡಿ, ಸಾದಿಕ್, ಇಕ್ಬಾಲ್ ನಂದರಬೆಟ್ಟು, ಸಮದ್ ಗೂಡಿನಬಳಿ, ಫಾರೂಕ್ ಗೂಡಿನಬಳಿ, ಮುಸ್ತಫಾ ಕೋಡಪದವು, ನಾಗೇಶ್ ರಿಕ್ಷಾ, ಅಶ್ರಫ್ ಲೊರೆಟ್ಟೊಪದವು, ಕಾಸಿಂ ನಂದಾವರ, ಜಲೀಲ್ ತಾಳಿಪಡ್ಪು ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment