ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಮೂಡುಪಡುಕೋಡಿ ಗ್ರಾಮದ ರಝಾ ನಗರದ ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 5ನೇ ತರಗತಿ ವಿದ್ಯಾರ್ಥಿ ಚಿಂತನ್ ಅವರು ಮುಂಬೈನಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ 25ನೇ ಯೂರೋ ಏಷ್ಯಾ ಡಬ್ಲ್ಯು.ಎಫ್.ಎಸ್.ಕೆ.ಒ. ಮುಕ್ತ ಕರಾಟೆ ಚಾಂಪಿಯನ್ ಶಿಪ್‍ನ ಕುಮಿಟೆ ಮತ್ತು ಕಟಾ ವಿಭಾಗದಲ್ಲಿ ಸ್ಪರ್ಧಿಸಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಯಶೋಧರ-ಹೇಮಲತಾ ದಂಪತಿಯ ಪುತ್ರನಾಗಿರುವ ಇವರು ಕರಾಟೆ ತರಬೇತುದಾರ ಮುಹಮ್ಮದ್ ನದೀಮ್, ಮುಹಮ್ಮದ್ ಸರ್ಪ್‍ರಾಝ್ ಮತ್ತು ಮೊಹಮ್ಮದ್ ಶಾಕಿರ್ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.
ಜಾಹೀರಾತುಗಳು
0 comments:
Post a Comment