ಉಡುಪಿ (ಕರಾವಳಿ ಟೈಮ್ಸ್) : ಉಡುಪಿಯ ಮರವಂತೆಯಲ್ಲಿ ಭಾನುವಾರ ಪೂರ್ವಾಹ್ನ ಬೋರ್‍ವೆಲ್ ಕೆಲಸದ ವೇಳೆ ಮಣ್ಣು ಕುಸಿದು ಭೂಮಿಯೊಳಗೆ ಸಿಲುಕಿಕೊಂಡಿದ್ದ ರೋಹಿತ್ ಖಾರ್ವಿಯನ್ನು ಅಗ್ನಿಶಾಮಕ ಸಿಬ್ಬಂದಿಗಳು ಸತತ ಕಾರ್ಯಾಚರಣೆ ಮೂಲಕ ರಕ್ಷಿಸಿ ಮೇಲೆತ್ತುವಲ್ಲಿ ಸಫಲರಾಗಿದ್ದಾರೆ. ಈ ಮೂಲಕ ರೋಹಿತ್ ಖಾರ್ವಿ ಪುನರ್‍ಜನ್ಮ ಪಡೆದುಕೊಂಡಿದ್ದಾರೆ.
ಉಡುಪಿಯ ಅಗ್ನಿಶಾಮಕ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಸಂಜೆಯ ವೇಳೆಗೆ ರೋಹಿತ್‍ರನ್ನು ಯಶಸ್ವಿಯಾಗಿ ಮೇಲಕ್ಕೆತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ರೋಹಿತ್ ‘ಇದು ಅಜಾಗರೂಕತೆ ಅಲ್ಲ, ಆಕಸ್ಮಿಕವಾಗಿ ನಡೆದ ಘಟನೆಯಾಗಿದೆ. ನಾವು ನಾಲ್ಕು ಜನ ಬೋರ್ವೆಲ್ ಕೆಲಸಕ್ಕೆ ತೆರಳಿದೆವು. ನಮ್ಮ ಕೆಲಸ ಅಂತಿಮ ಹಂತದಲ್ಲಿತ್ತು. ಏಕಾಏಕಿ ಸುತ್ತ ಇದ್ದ ಮಣ್ಣು ಸುಮಾರು ಹದಿನೈದು ಅಡಿ ಕೆಳಕ್ಕೆ ಕುಸಿಯಿತು. ನಮ್ಮದು ಯಾವುದೇ ಕಾರಣಕ್ಕೆ ಅಜಾಗರೂಕತೆಯಲ್ಲ. ಆಕಸ್ಮಿಕವಾಗಿ ನಡೆದ ಘಟನೆ ಇದು. 25 ವರ್ಷದಿಂದ ಈ ಕೆಲಸ ಮಾಡುತ್ತಿದ್ದೇನೆ. ಹಿಂದೆಂದೂ ಹೀಗಾಗಿಲ್ಲ. ಗದ್ದೆಯ ಮಣ್ಣು ಮೃದುವಾಗಿದ್ದರಿಂದ ನಾನು ಕುಸಿದು ಬಿದ್ದೆ. ನನ್ನ ಎದೆಯ ಮಟ್ಟದವರೆಗೆ ಮಣ್ಣು ಬಿದ್ದಿತ್ತು. ನಾನೇ ಮೇಲೇಳಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ, ಈ ತರಹದ ಅನುಭವ ಇದೇ ಮೊದಲು ಎಂದಿದ್ದಾರೆ.
ಇದನ್ನೂ ಓದಿ .......
http://www.karavalitimes.in/2020/02/Udupi-Borwell-collapse.html
0 comments:
Post a Comment