ಬೆಳ್ತಂಗಡಿ (ಕರಾವಳಿ ಟೈಮ್ಸ್) : ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರು ಶನಿವಾರ ಕುವೆಟ್ಟು ಗ್ರಾಮದ ಪೊಟ್ಟುಕೆರೆ ಎಂಬಲ್ಲಿ ವಾಹನ ತಪಾಸಣೆ ನಡೆಸುವ ಸಂದರ್ಭ ವೇಣೂರು ಹಾಗೂ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ಆರೋಪಿಗಳಾದ ಮುಂಡಾಜೆ ನಿವಾಸಿ ಸತೀಶ ಅಲಿಯಾಸ್ ಸ್ಕಾರ್ಪಿಯೋ ಸತೀಶ (33), ಪುತ್ತೂರು ತಾಲೂಕು, ಆರ್ಯಾಪು ನಿವಾಸಿ ರವಿ ಅಲಿಯಾಸ್ ಪುಟ್ಟು ರವಿ (29) ಹಾಗೂ ಮಂಗಳೂರು ತಾಲೂಕು ಕುಡುಪು ನಿವಾಸಿ ಹರೀಶ್ ಪೂಜಾರಿ (29) ಎಂಬವರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ರಿ ಆರೋಪಿಗಳ ವಿರುದ್ದ ವೇಣೂರು ಪೆÇಲೀಸ್ ಠಾಣೆಯ ಅಪರಾಧ ಕ್ರಮಾಂಕ 86/2019, 04/2020, 15/2020 ಮತ್ತು ಧರ್ಮಸ್ಥಳ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 84/2019, 88/2019 ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ 115 ಗ್ರಾಂ ತೂಕದ ಚಿನ್ನಾಭರಣಗಳು, 61 ಗ್ರಾಂ ಬೆಳ್ಳಿಯ ಆಭರಣಗಳು, ಲ್ಯಾಪ್ ಟ್ಯಾಪ್ ಮತ್ತು ಮೊಬೈಲ್ ವಶಪಡಿಸಲಾಗಿದೆ ಹಾಗೂ ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ 2 ಮೊಟಾರು ಸೈಕಲ್‍ಗಳು, 1 ಮಾರುತಿ 800 ಕಾರು, 4 ಮೊಬೈಲ್‍ಗಳನ್ನು ವಶಪಡಿಕೊಳ್ಳಲಾಗಿದೆ. ವಶಪಡಿಸಲಾದ ಸೊತ್ತುಗಳ ಒಟ್ಟು ಮೌಲ್ಯ 5.5 ಲಕ್ಷ ರೂಪಾಯಿಗಳು ಅಂದಾಜಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment