ಬೆಳ್ಳಾರೆ (ಕರಾವಳಿ ಟೈಮ್ಸ್) : ಎಸ್ಸೆಸ್ಸೆಫ್ ಬೆಳ್ಳಾರೆ ಸೆಕ್ಟರ್ ವತಿಯಿಂದ “HOW TO FACE EXAM” (ಪರೀಕ್ಷೆ ಎದುರಿಸುವುದು ಹೇಗೆ?) ಶಿಬಿರವು ಇಲ್ಲಿನ ಜ್ಞಾನ ದೀಪ ಸಂಸ್ಥೆಯಲ್ಲಿ ಭಾನುವಾರ (ಫೆ 23) ಬೆಳಿಗ್ಗೆ ನಡೆಯಿತು.
ಸೆಕ್ಟರ್ ಅಧ್ಯಕ್ಷ ಮುನೀರ್ ಹನೀಫಿ ಶಿಬಿರದ ಅಧ್ಯಕ್ಷೆತೆ ವಹಿಸಿದ್ದರು. ಜ್ಞಾನದೀಪ ವಿದ್ಯಾಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಉದ್ಘಾಟಿಸಿದರು. ಸ್ವಾದಿಕ್ ಮಾಸ್ಟರ್ ಕಲ್ಲುಗುಂಡಿ ಶಿಬಿರ ನಡೆಸಿಕೊಟ್ಟರು. ಜ್ಞಾನ ದೀಪ ವಿದ್ಯಾ ಸಂಸ್ಥೆಯ ಅಧ್ಯಾಪಕ ಗಣೇಶ್ ಸಂಟ್ಯಾರ್, ಎಸ್ಸೆಸ್ಸೆಫ್ ಬೆಳ್ಳಾರೆ ಸೆಕ್ಟರ್ ಮಾಜಿ ಅಧ್ಯಕ್ಷ ಕಲಾಂ ಝುಹ್ರಿ ಬೆಳ್ಳಾರೆ, ಕಾರ್ಯದರ್ಶಿ ಇಕ್ಬಾಲ್ ಪಳ್ಳಿಮಜಲ್ ಮೊದಲಾದವರು ಭಾಗವಹಿಸಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಫೀಕ್ ಅಮ್ಜದಿ ಇಂದ್ರಾಜೆ ಸ್ವಾಗತಿಸಿ, ವಂದಿಸಿದರು.
0 comments:
Post a Comment