ಬಂಟ್ವಾಳ (ಕರಾವಳಿ ಟೈಮ್ಸ್) : ಬಂಟ್ವಾಳ ವಲಯ ಅರಣ್ಯಾಧಿಕಾರಿ ಬಿ. ಸುರೇಶ್ ಅವರು ವರ್ಗಾವಣೆಗೊಂಡು ಶಿವಮೊಗ್ಗ ಜಿಲ್ಲೆಯ, ಸಾಗರ-ಶಿರಾಲಕೊಪ್ಪ ವಲಯ ಅರಣ್ಯಾಧಿಕಾರಿಯಾಗಿ ತೆರಳುತ್ತಿರುವ ಹಿನ್ನಲೆಯಲ್ಲಿ ಅವರಿಗೆ ಹಾಗೂ ಅವರ ಪತ್ನಿ ಭಾಗ್ಯ ಅವರಿಗೆ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ಬಿ ಸಿ ರೋಡಿನ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಶನಿವಾರ ಸಂಜೆ ನಡೆಯಿತು.
ಬಂಟ್ವಾಳ ಅರಣ್ಯಾಧಿಕಾರಿಯಾಗಿ ಮೂರುವರೆ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಸುರೇಶ್ ಕುಮಾರ್ ಇದೀಗ ವರ್ಗಾವಣೆಯಾಗುತ್ತಿದ್ದಾರೆ. ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ ವಲಯ ಅರಣ್ಯಾಧಿಕಾರಿ ಅನಿಲ್, ಅರಣ್ಯ ರಕ್ಷಕರಾದ ಜಿತೇಶ್, ದಯಾನಂದ, ಸ್ಮಿತಾ, ಮನೋಜ್, ರೇಖಾ, ಲಕ್ಮೀನಾರಾಯಣ, ಅರಣ್ಯ ವೀಕ್ಷಕ ಭಾಸ್ಕರ, ಕಛೇರಿ ಸಿಬ್ಬಂದಿಗಳು ಭಾಗವಹಿಸಿದ್ದರು.
ಉಪವಲಯ ಅರಣ್ಯಾಧಿಕಾರಿ ಪ್ರೀತಂ ಎಸ್ ಸ್ವಾಗತಿಸಿ, ಅರಣ್ಯ ರಕ್ಷಕ ವಿನಯ್ ಎಸ್ ವಂದಿಸಿದರು. ಉಪವಲಯ ಅರಣ್ಯಾಧಿಕಾರಿ ಯಶೋಧರ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment