ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಕಲ್ಲಡ್ಕ ನಿವಾಸಿ ಸಂದೇಶ್ ಎಂಬವರು ಮೆಲ್ಕಾರ್ ಜಂಕ್ಷನ್ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳವುಗೈದ ಪ್ರಕರರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಠಾಣಾ ಪೆÇಲೀಸರು ಆರೋಪಿ ತಮಿಳುನಾಡು ರಾಜ್ಯದ ಪುದುಕೋಟೆ ಜಿಲ್ಲೆಯ ಅರಂತಾಂಗಿ ತಾಲೂಕಿನ ಒಡಕವಾಡಿ ನಿವಾಸಿ ರಾಜಾ ಕೆ (38) ಎಂಬಾತನನ್ನು ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ಮಂಗಳವಾರ ಬಂಧಿಸಿದ್ದಾರೆ.
ಫೆ 13 ರಂದು ಮೆಲ್ಕಾರ್ ಎಸ್ ಆರ್ ಮೊಬೈಲ್ ಅಂಗಡಿಯ ಕೆಳಗಡೆ ಸಂದೇಶ್ ಅವರು ತನ್ನ ದ್ವಿಚಕ್ರ ವಾಹನ ಆಕ್ಟೀವ್ ಹೊಂಡಾ ನಿಲ್ಲಿಸಿದ್ದು, ಅದನ್ನು ಅಲ್ಲಿಂದ ಕಳವುಗೈಯಲಾಗಿತ್ತು. ಈ ಬಗ್ಗೆ ಫೆ 15 ರಂದು ಬಂಟ್ವಾಳ ನಗರ ಠಾಣೆ ಯಲ್ಲಿ ದೂರು ದಾಖಲಾಗಿತ್ತು.
ಆರೋಪಿ ಕಳವುಗೈದ ವಾಹನವನ್ನು ಮಂಗಳೂರಿಗೆ ಮಾರಾಟಕ್ಕೆಂದು ಕೊಂಡು ಹೋಗಿ ಅದು ಅಲ್ಲಿ ಮಾರಾಟವಾಗದೆ ಇದ್ದ ಕಾರಣ ವಾಪಾಸು ಮೈಸೂರು ಕಡೆ ವಾಹನದಲ್ಲೇ ತೆರಳುತ್ತಿದ್ದ ವೇಳೆ ಕಲ್ಲಡ್ಕ ಸಮೀಪದ ದಾಸಕೋಡಿಯಲ್ಲಿ ಬಂಟ್ವಾಳ ನಗರ ಠಾಣಾ ಎಸ್ಸೈ ಅವಿನಾಶ್ ನೇತೃತ್ವದ ಪೊಲೀಸರು ತಪಾಸಣೆ ನಡೆಸುವ ವೇಳೆ ಸಿಕ್ಕಿ ಬಿದ್ದಿದ್ದಾನೆ ಎನ್ನಲಾಗಿದೆ.
ಪೊಲೀಸರ ತಪಾಸಣೆ ವೇಳೆ ಆರೋಪಿ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದು, ಈ ಸಂದರ್ಭ ಸಂಶಯಗೊಂಡ ಪೊಲೀಸರು ಈತನನ್ನು ಬೆನ್ನಟ್ಟಿ ಹಿಡಿದು ವಿಚಾರಿಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.
0 comments:
Post a Comment