ಬಂಟ್ವಾಳ (ಕರಾವಳಿ ಟೈಮ್ಸ್) : ಮಣಿನಾಲ್ಕೂರು ಗ್ರಾಮದ ಸರಪಾಡಿ-ಬಾಚಕೆರೆ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಬೆಳ್ಳಿ ಹಬ್ಬ ಸಂಭ್ರಮ, ಏಕಾಹ ಭಜನೆ ಹಾಗೂ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ 16ನೇ ವರ್ಷದ ಯಕ್ಷಗಾನ ಬಯಲಾಟ ಶ್ರೀ ದೇವಿ ಮಹಾತ್ಮೆ ಕಾರ್ಯಕ್ರಮಗಳು ಫೆ. 26 ಹಾಗೂ 27 ರಂದು ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಧರ್ಮದರ್ಶಿ ದೇಜಪ್ಪ ಬಾಚಕೆರೆ ತಿಳಿಸಿದರು.
ಶನಿವಾರ ಬಿ ಸಿ ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕ್ಷೇತ್ರದ 25ನೇ ವಾರ್ಷಿಕೋತ್ಸವದ ಅಂಗವಾಗಿ ಈ ಕಾರ್ಯಕ್ರಮ ನಡೆಯಲಿದ್ದು, ಫೆ 26 ರಂದು ಬುಧವಾರ ಸೂರ್ಯಾಸ್ತದಿಂದ ಮರುದಿನ ಸೂರ್ಯೋದಯದವರೆಗೆ ವಿವಿಧ ಭಜನಾ ಮಂಡಳಿಯವರಿಂದ ಏಕಾಹ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದರು.
ಬೆಳಿಗ್ಗೆ 6.50ಕ್ಕೆ ದೀಪ ಪ್ರಜ್ವಲನೆಯೊಂದಿಗೆ ಶ್ರೀ ಕ್ಷೇತ್ರ ಕಟೀಲಿನ ಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣ ಅವರ ದಿವ್ಯ ಉಪಸ್ಥಿತಿಯಲ್ಲಿ ಭಜನೆ ಪ್ರಾರಂಭವಾಗಲಿದ್ದು, ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್, ನೋಟರಿ-ನ್ಯಾಯವಾದಿ ಜಯರಾಮ ವಿಟ್ಲ, ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲುಗುತ್ತು, ಸುರೇಶ್ ಶೆಟ್ಟಿ ಮೀಯಾರು, ಓಬಯ ಕಜೆಕಾರು, ಲಕ್ಷ್ಮೀ ನಾರಾಯಣ ನೇಲ್ಯಪಳಿಕೆ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಧಾಕೃಷ್ಣ ಶೆಟ್ಟಿ ಮಾವಿನಕಟ್ಟೆ, ರಾಜೇಶ್ ಬೊಳ್ಳುಕಲ್ಲು, ಓಬಯ್ಯ ಕಜೆಕಾರು, ಲಕ್ಷ್ಮೀ ನಾರಾಯಣ ನೇಲ್ಯಪಳಿಕೆ, ಸುಂದರ ಬಾಚಕೆರೆ, ಧರಣ್, ಪುರುಷೋತ್ತಮ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment