ಬಂಟ್ವಾಳ (ಕರಾವಳಿ ಟೈಮ್ಸ್) : ಬಿ.ಸಿ.ರೋಡು ಚಂಡಿಕಾ ನಗರದ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ ಶನಿವಾರ ಸಂಪನ್ನಗೊಂಡಿತು.
ಫೆ. 13 ರಂದು ಪ್ರಾರ್ಥನೆ, ಪುಣ್ಯಾಹ ವಾಚನ, ಪ್ರಾಸಾದ ಶುದ್ಧಿ, ವಾಸ್ತು ಹೋಮ, ರಕ್ಷೋಘ್ನ ಹೋಮ, ವಾಸ್ತು ಬಲಿ, ಮಹಾ ಪೂಜೆ ನಡೆಯಿತು.
ಫೆ. 14 ರಂದು ಗಣ ಹೋಮ, ಬಿಂಬ ಕಲಶ ಪೂಜೆ, ಬಿಂಬ ಕಲಶಾಭಿಷೇಕ, ಮಹಾಪೂಜೆ ನಡೆಯಿತು. ರಾತ್ರಿ ಮಹಾ ಪೂಜೆ, ಬಲಿ ಹೊರಡುವುದು, ವಸಂತ ಕಟ್ಟೆ ಪೂಜೆ, ವಿಶೇಷ ನರ್ತನ ಬಲಿ ನಡೆಯಿತು.
ಫೆ. 15 (ಇಂದು) ದರ್ಶನ ಬಲಿ ಉತ್ಸವ, ನಂತರ ಬಟ್ಟಲು ಕಾಣಿಕೆ ನಡೆಯಿತು. ರಾಜಾಂಗಣ ಪ್ರಸಾದ ವಿತರಣೆ ನಡೆಯಿತು.
0 comments:
Post a Comment