ಬಂಟ್ವಾಳ (ಕರಾವಳಿ ಟೈಮ್ಸ್) : ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್, ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖೆಯ ಆಶ್ರಯದಲ್ಲಿ ಮಜ್ಲಿಸುನ್ನೂರ್ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮವು ಇಂದು (ಮಾ. 7) ಮಗ್ರಿಬ್ ಬಳಿಕ ಆಲಡ್ಕ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಛೇರಿ ಬಳಿಯ ಮರ್‍ಹೂಂ ಶೈಖುನಾ ಮಿತ್ತಬೈಲು ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ.
ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೋ ಅಧ್ಯಕ್ಷತೆ ವಹಿಸಲಿದ್ದು, ಎಸ್ಕೆಎಸ್ಸೆಸ್ಸೆಫ್ ಪಾಣೆಮಂಗಳೂರು ಕ್ಲಸ್ಟರ್ ಅಧ್ಯಕ್ಷ ಅಬೂಸ್ವಾಲಿಹ್ ಫೈಝಿ ಉದ್ಘಾಟಿಸುವರು. ಸಯ್ಯಿದ್ ಹುಸೈನ್ ಬಾ ಅಲವಿ ತಂಙಳ್ ಕುಕ್ಕಾಜೆ ದುವಾ ನೆರವೇರಿಸುವರು. ಸಾಲ್ಮರ ಮರಿಯಮ್ ಹಿಫ್ಲುಲ್ ಕುರ್-ಆನ್ ಹಾಗೂ ದಾರುಲ್ ಹಸನಿಯ್ಯ ಕಾಲೇಜು ಮುದರ್ರಿಸ್ ಅನ್ವರ್ ಸ್ವಾದಿಖ್ ಮುಸ್ಲಿಯಾರ್ ಮುಖ್ಯ ಭಾಷಣಗೈಯುವರು. ಮುಖ್ಯ ಅತಿಥಿಗಳಾಗಿ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಜಿಲ್ಲಾ ವಕ್ಫ್ ಸಮಿತಿ ಮಾಜಿ ಅಧ್ಯಕ್ಷ ಉಸ್ಮಾನ್ ಹಾಜಿ, ಉದ್ಯಮಿ ಅಬ್ದುಲ್ ಲತೀಫ್ ಕಾರಾಜೆ ಮೊದಲಾದವರು ಭಾಗವಹಿಸುವರು. ಮುಹಮ್ಮದ್ ತ್ವಾಯಿಫ್ ಮುಸ್ಲಿಯಾರ್ ಹಾಗೂ ಸಂಗಡಿಗರಿಂದ ಮಜ್ಲಿಸ್ಸುನ್ನೂರ್ ಕಾರ್ಯಕ್ರಮ ನಡೆಯಲಿದೆ. ಶಾಖಾ ಗೌರವಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಮಾಜಿ ಅಧ್ಯಕ್ಷ ಹಾಜಿ ಅಬೂಬಕ್ಕರ್ ಎನ್.ಬಿ., ಮಾಜಿ ಕೋಶಾಧಿಕಾರಿ ಪಿ.ಬಿ. ಅಹ್ಮದ್ ಹಾಜಿ ಮೊದಲಾದವರು ಉಪಸ್ಥಿತರಿರುವರು ಎಂದು ಶಾಖಾಧ್ಯಕ್ಷ ಹನೀಫ್ ಹಾಸ್ಕೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment