ಸುಳ್ಯ (ಕರಾವಳಿ ಟೈಮ್ಸ್) : ತಾಲೂಕಿನ ಐವರ್ನಾಡು ಶ್ರೀಪಂಚಲಿಂಗೇಶ್ವರ ಜಾತ್ರೆಯ ರಂಗಪೂಜೆಯ ದಿನದಂದು ಇಲ್ಲಿನ ದೇರಾಜೆ ಗೆಳೆಯರ ಬಳಗದ ವತಿಯಿಂದ ನಡೆದ ಸಿಂಚನ ಸ್ವರ ಧಾರ ಗಾಯನ, ನೃತ್ಯ, ಮಿಮಿಕ್ರಿ, ನಗೆ ಹಬ್ಬವು ಕುಮಾರ್ ಪೆರ್ನಾಜೆ ಅವರ ಪರಿಕಲ್ಪನೆಯಲ್ಲಿ ವಿಶಿಷ್ಟ ರೀತಿಯಲ್ಲಿ ಮೂಡಿ ಬಂತು.
ಗ್ರಾಮೀಣ ಕಲಾ ಪ್ರತಿಭೆಗಳ ಸ್ವರ ಸಿಂಚನ ಕಲಾತಂಡದ ಮುಖ್ಯ ಶಿಕ್ಷಕಿ ಸವಿತಾ ಕೊಡಂದೂರು, ಸಹ ಕಲಾವಿದರಾಗಿ ಕು. ಸಿಂಚನ ಲಕ್ಷ್ಮಿ ಕೊಡಂದೂರು, ಪಲ್ಲವಿ ಉಬರ್, ಕಿರಣ್ ಶ್ರೀ, ಶ್ರೀರಕ್ಷಾ ಮೊಗಸಾಲೆ, ಹಾಡಿದರು. ಪಟ್ಟಾಭಿರಾಮ್ ಸುಳ್ಯ ಇವರು ಬಹುಮುಖ ಪ್ರತಿಭೆಗಳನ್ನು ಪರಿಚಯಿಸಿದರು. ರಾಜಕೀಯ, ಸಾಹಿತ್ಯ, ಜನರ ನಿದ್ರಾ ವೈಖರಿ, ಮಗು, ಪ್ರಾಣಿ-ಪಕ್ಷಿಗಳ ಕೂಗು, ಮಾರ್ಚ್ ಫಾಸ್ಟ್, ಮುಂತಾದ ವೈವಿಧ್ಯಮಯ ಘಟನೆಗಳನ್ನು ಪ್ರದರ್ಶಿಸಿ ರಂಜಿಸಿದರು. ಕೀಬೋರ್ಡ್‍ನಲ್ಲಿ ಪ್ರಸಾದ್ ವರ್ಮಾ ವಿಟ್ಲ, ರಿದಂ ಪ್ಯಾಡ್‍ನಲ್ಲಿ ಸುಹಾಸ್ ಪುತ್ತೂರು, ತಬಲಾದಲ್ಲಿ ಸುಮನ್ ದೇವಾಡಿಗ ಪುತ್ತೂರು, ಪಕ್ಕವಾದ್ಯದಲ್ಲಿ ಸಾಥ್ ನೀಡಿದರು, ಸೌಮ್ಯ ಪೆರ್ನಾಜೆ, ರಾಜಣ್ಣ ಉಬರ್, ವಿಜಯಕುಮಾರ್ ಆನೆಗುಂಡಿ, ಜಯಲಕ್ಷ್ಮಿ ಆನೆಗುಂಡಿ ಸಹಕರಿಸಿದರು. ಪದ್ಮರಾಜ್ ಚಾರ್ವಾಕ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment